LATEST NEWS
ಬಪ್ಪನಾಡು ಜಾತ್ರೆ ರಥೋತ್ಸವದ ವೇಳೆ ಏಕಾಏಕಿ ಕುಸಿದ ತೇರಿನ ಮೇಲ್ಭಾಗ – ಅಪಾಯದಿಂದ ಪಾರಾದ ಭಕ್ತರು

ಮುಲ್ಕಿ, ಎಪ್ರಿಲ್ 19: ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವದ ವೇಳೆ ತೇರಿನ ಮೇಲ್ಬಾಗ ಕುಸಿದು ಬಿದ್ದ ಘಟನೆ ನಡೆದಿದ್ದು, ಘಟನೆಯಲ್ಲಿ ಯಾರಿಗೂ ಯಾವುದೇ ರೀತಿ ಅಪಾಯವುಂಟಾಗಲಿಲ್ಲ.
ಮೂಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರು ಮುರಿದು ಬಿದ್ದಿರುವ ಘಟನೆ ತಡರಾತ್ರಿ ನಡೆದಿದೆ.

ಶನಿವಾರ ಬೆಳಗ್ಗಿನ ಜಾವ ಸುಮಾರು 1.40 ರಿಂದ 2 ಗಂಟೆ ವೇಳೆ ಬ್ರಹ್ಮರಥೋತ್ಸವ ತೇರಿನ ಮೇಲ್ಬಾಗ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಅರ್ಚಕರು ತೇರಿನಲ್ಲೇ ಇದ್ದರು. ಕೆಳಗಡೆ ಸಾವಿರಾರು ಭಕ್ತರು ರಥ ಎಳೆಯುವುದರಲ್ಲಿ ತಲ್ಲೀನರಾಗಿದ್ದರು. ಏಕಾ ಏಕಿ ರಥವನ್ನು ನಿಗ್ರಹಿಸುವ ದಂಡ ತುಂಡಾದ ಪರಿಣಾಮ ರಥದ ಮೇಲ್ಬಾಗ ಸಂಪೂರ್ಣ ಧರೆಗೆ ಉರುಳಿದೆ. ಒಬ್ಬರು ಅರ್ಚಕರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.
ಸಾವಿರಾರೂ ಭಕ್ತರು ಪಾಲ್ಗೊಂಡಿದ್ದ ರಥೋತ್ಸವದ ವೇಳೆ ಈ ಘಟನೆ ನಡೆದಿದ್ದು. ಯಾರಿಗೂ ಯವುದೇ ರೀತಿ ಅಪಾಯವಾಗದಂತೆ ದೇವಿಯೇ ಕಾಪಾಡಿದ್ದಾಳೆ ಎಂದು ಭಕ್ತರ ನಂಬಿಕೆ. ಅಲ್ಲಿ ನೆರೆದಿದ್ದ ಭಕ್ತರು ತೇರು ಬಿದ್ದ ದೃಶ್ಯವನ್ನು ಕಂಡು ಆತಂಕಗೊಂಡಿದ್ದರು. ಆದರೆ ಅದೃಷ್ಟವಶಾತ್ ಈ ಘಟನೆಯಿಂದ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುವ ಕುರಿತು ವರದಿಯಾಗಿದೆ. ತೇರು ಬಿದ್ದ ನಂತರ ದೇವರ ಉತ್ಸವ ಮತ್ತೆ ಮುಂದುವರಿಸಲು ತೀರ್ಮಾನ ಮಾಡಲಾಯಿತು. ಚಂದ್ರಮಂಡಲ ತೇರಿನಲ್ಲಿ ಉತ್ಸವ ಮುಂದುವರೆದಿದೆ.
1 Comment