BANTWAL
ಬಂಟ್ವಾಳ ಕಾರಿಂಜೇಶ್ವರನ ಸನ್ನಿಧಿಯಲ್ಲಿ ಸಂಪ್ರದಾಯದ ತೆನೆ ಹಬ್ಬ..!

ಸಂಪ್ರದಾಯದ ತೆನೆ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಇತಿಹಾಸ ಪ್ರಸಿದ್ದ ಕಾರಿಂಜ ದೇವಸ್ಥಾನದಿಂದ ದೇವರು ವಿವಿಧ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸಿಕೊಂಡು ಸುಮಾರು 9 ಕಿಮೀ ದೂರದ ಸರಪಾಡಿಯ ಹಲ್ಲಂಗಾರು ಕಟ್ಟೆಯಲ್ಲಿ ಆಗಮಿಸಿ ದೇವರ ದರ್ಶನ ಬಲಿ ಸಹಿತ ವಿಶೇಷ ಪೂಜೆ ನಡೆದು ಭತ್ತದ ತೆನೆಯನ್ನು ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು.
ಬಂಟ್ವಾಳ: ಸಂಪ್ರದಾಯದ ತೆನೆ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಇತಿಹಾಸ ಪ್ರಸಿದ್ದ ಕಾರಿಂಜ ದೇವಸ್ಥಾನದಿಂದ ದೇವರು ವಿವಿಧ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸಿಕೊಂಡು ಸುಮಾರು 9 ಕಿಮೀ ದೂರದ ಸರಪಾಡಿಯ ಹಲ್ಲಂಗಾರು ಕಟ್ಟೆಯಲ್ಲಿ ಆಗಮಿಸಿ ದೇವರ ದರ್ಶನ ಬಲಿ ಸಹಿತ ವಿಶೇಷ ಪೂಜೆ ನಡೆದು ಭತ್ತದ ತೆನೆಯನ್ನು ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು.

ಮುಂಜಾನೆ ಸೂರ್ಯೋದಯಕ್ಕೆ ಮುನ್ನಾ ಕಾರಿಂಜದಿಂದ ವಾದ್ಯ ವೃಂದ ಸಹಿತವಾಗಿ ಅರ್ಚಕರು, ತಂತ್ರಿಗಳು, ಗ್ರಾಮಣಿಗಳು, ಮುಖ್ಯಸ್ಥರು ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಶೇಡಿಮೆ ಕಟ್ಟೆ, ದಂಡ್ಯೊಟ್ಟು ಕಟ್ಟೆ, ದೇವಶ್ಯ ಕಟ್ಟೆ, ಸೂಳ್ದುಕ್ಕು ಕಟ್ಟೆ, ಭಂಡಾರಿಕಟ್ಟೆ, ಸಮಗಾರನ ಕಟ್ಟೆ ಹಾಗೂ ಹಲ್ಲಂಗಾರು ಕಟ್ಟೆಯಲ್ಲಿ ಹೀಗೆ 7 ಕಟ್ಟೆಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.
ಹಲ್ಲಂಗಾರಿನಲ್ಲಿ ಬಂಗಾರದ ತೆನೆ ಬೆಳೆಯಿತೆನ್ನಲಾದ ಜೈನ ಮನೆತನದ ಲೀಲಾವತಿ ಅಮ್ಮನವರಿಗೆ ಸೇರಿದ ಕಂಬಳದ ಗದ್ದೆಯಿಂದ ತೆನೆಯನ್ನು ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿ ಭಕ್ತರಿಗೆ ವಿತರಿಸಿ ಅವರು ತೆನೆಹಬ್ಬದ ಮೂಲಕ ಮನೆ ತುಂಬಿಸಿಕೊಂಡರು.
ಬಳಿಕ ಈ ಪರಿಸರದ ಬಹುತೇಕ ಮನೆಗಳಲ್ಲಿ ಹೊಸ ಅಕ್ಕಿ ಊಟದ ಸಂಪ್ರದಾಯ ನೆರವೇರಿಸಲಾಯಿತು.
https://youtu.be/0UEPtohMWMA