BANTWAL
ಬಂಟ್ವಾಳ : ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾದ ಪೊಲೀಸ್ ಸಿಬಂದಿ ಮೊಬೈಲ್ ಕಳವು..!
ಆನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆಂದು ದಾಖಲಾಗಿದ್ದ ಪೋಲಿಸ್ ಸಿಬ್ಬಂದಿಯೋರ್ವರ ಎರಡು ಮೊಬೈಲ್ ಫೋನ್ ಕಳವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಬಂಟ್ವಾಳ: ಆನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆಂದು ದಾಖಲಾಗಿದ್ದ ಪೋಲಿಸ್ ಸಿಬ್ಬಂದಿಯೋರ್ವರ ಎರಡು ಮೊಬೈಲ್ ಫೋನ್ ಕಳವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಮೆಲ್ಕಾರ್ ಟ್ರಾಫಿಕ್ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದ ಕಾರಣ ಸೆ.17 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಳಿಕ ಅವರು ಸೆ.19 ರಂದು ಜನರಲ್ ವಾರ್ಡ್ ಗೆ ಸ್ಥಳಾಂತರವಾಗಿದ್ದರು. ಅವರು ಬೆಡ್ ನಲ್ಲಿ ಮಲಗಿದ್ದ ವೇಳೆ ಇವರ ಬೆಡ್ ಪಕ್ಕದಲ್ಲಿ ಟೇಬಲ್ ಮೇಲೆ ಇರಿಸಲಾಗಿದ್ದ ಸಾವಿರಾರು ರೂ ಮುಖಬೆಲೆಯ ಒಂದು ಮೊಬೈಲ್ ಹಾಗೂ ಕೀ ಪೇಡ್ ಮೊಬೈಲ್ ಫೋನ್ ಎರಡನ್ನು ಕಳ್ಳ ಕದ್ದು ಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.
ಕಳ್ಳ ಮೊಬೈಲ್ ಕಳ್ಳತನ ಮಾಡಿದ ಮತ್ತು ಆತ ಆಸ್ಪತ್ರೆಗೆ ಬಂದು ಹೋಗುವ ಬಗ್ಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ಈತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜ್ಜಿ ಯೋರ್ವರಲ್ಲಿ ಒಮ್ಮೆ ಪೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಪೋನ್ ಮಾಡಲು ಇದೆ ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋದ ವ್ಯಕ್ತಿ ಮೊಬೈಲ್ ಹಿಡಿದು ಹೋಗಿದ್ದಾನೆ.
ಅದೇ ವ್ಯಕ್ತಿ ಮತ್ತೆ ಪೋಲೀಸ್ ಸಿಬ್ಬಂದಿಯ ಪೋನ್ ಕಳ್ಳತನ ಮಾಡಿರುವಂತದ್ದು, ಇದು ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.
ಇದೀಗ ಆಸ್ಪತ್ರೆಯಲ್ಲಿ ಈತನ ಪೋಟೋ ಅಂಟಿಸಲಾಗಿದ್ದು,ಈತನ ಮೊಬೈಲ್ ಕಳ್ಳ ಈತನ ಚಹರೆ ಯನ್ನು ಗಮನಿಸಿದವರು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.