DAKSHINA KANNADA
ಬಂಟ್ವಾಳ : ಬಾಗಿಲ ಬಳಿ ಇಟ್ಟ ಬೀಗದ ಕೀ ತೆಗೆದು ನಗ-ನಗದು ಕಳವು..!

ಬಂಟ್ವಾಳ: ಮನೆಯ ಬೀಗ ತೆಗೆದು ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ಮತ್ತು ನಗದು ಕಳ್ಳತನ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಬಿಸಿ ರೋಡಿನಲ್ಲಿ ನಡೆದಿದೆ.
ವೀಕ್ಷಿತ್ ಎಂಬವರ ಮನೆಯಿಂದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ನಗದು ಕಳವು ನಡೆದಿದೆ ಎಂದು ದೂರು ನೀಡಿದ್ದಾರೆ.
ಬಿಸಿರೋಡಿನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ಇವರು ಬೆಳಿಗ್ಗೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಾಗಿಲ ಸಮೀಪ ಇಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಸೋಪಾದ ಮೇಲೆ ಕೀ ಬಿದ್ದುಕೊಂಡಿತ್ತು.
ಮನೆಯ ಒಳಗೆ ಹೋಗಿ ನೋಡಿದಾಗ ಗಾಡ್ರೆಜ್ ಬಾಗಿಲು ತೆರದಿತ್ತು. ಅದರಲ್ಲಿ ಇರಿಸಲಾಗಿದ್ದ 67 ಗ್ರಾಂ ತೂಕದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನ ಹಾಗೂ 5 ಸಾವಿರ ರೂ ನಗದನ್ನು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
