BANTWAL
ಬಂಟ್ವಾಳ : ಶ್ರೀ ಕ್ಷೇತ್ರ ಪೊಳಲಿಯಲ್ಲಿ 250 ಲೀಟರ್ ತುಪ್ಪದಿಂದ ಬೆಳಗಿದ ಹಣತೆ..!
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಹಾಗೂ “ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ವತಿಯಿಂದ 250 ಲೀಟರ್ ತುಪ್ಪದಿಂದ ದೇವಾಲಯದಲ್ಲಿ ಪ್ರಥಮ ದಿನದಂದು ಹಣತೆ ಬೆಳಗಿತು.
ಈ ಹಣತೆ ಬೆಳಗುವ “ತುಡಾರ್ ಪರ್ಬ”ಕ್ಕೆ ಪೊಳಲಿ ದೇವಳದ ಅರ್ಚಕ ನಾರಾಯಣ್ ಭಟ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಲೋಹಿತ್ ಮಂಗಳೂರು, ಶರಣ್ ಪಂಪ್ ವೆಲ್, ಶಿವಾನಂದ್ ಮೆಂಡನ್, ವೆಂಕಟೇಶ್ ನಾವಡ ಮತ್ತಿತರರು ಉಪಸ್ಥಿತರಿದ್ದು ದೀಪ ಬೆಳಗಿಸಿ ಚಾಲನೆ ನೀಡಿದರು.
ತುಡಾರ್ ಪರ್ಬದ ದ್ವಿತೀಯ ದಿನದಂದು ಪೊಳಲಿ ಅರ್ಚಕ ಪವಿತ್ರ ಪಾಣಿ ಮಾಧವ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಪೊಳಲಿ ಹಾಗೂ ಇರುವೈಲು ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಮತ್ತು ಎಡಪದವು ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.
ಮಾಜಿ ಸಚಿವ ರಮಾನಾಥ ರೈ, ವರುಣ್ ಹೆಗ್ಡೆ, ವಿಜೇಶ್ ನಾಯ್ಕ್, ಗಿರೀಶ್ ಆಳ್ವ, ಪ್ರಸಾದ್ ಮಲ್ಲಿ, ನಿತಿನ್ ಕೊಟ್ಟಾರಿ, ಪೃಥ್ವಿ ಆಳ್ವ, ಜಗದೀಶ್ ಪಂಪ್ ವೆಲ್,ಭುವನೇಶ್ ಪಚ್ಚಿನಡ್ಕ, ಸಂತೋಷ್ ಶೆಟ್ಟಿ ಪೊಳಲಿ, ಹರೀಶ್ ಶೆಟ್ಟಿ ಪೊಳಲಿ, ಸುನೀಲ್ ಪೊಳಲಿ,ರಾಜೇಶ್ ಪೊಳಲಿ, ಚಂದ್ರಹಾಸ್ ಪಲ್ಲಿಪಾಡಿ, ಲಕ್ಷ್ಮೀಶ್ ಶೆಟ್ಟಿ, ಉಪಸ್ಥಿತರಿದ್ದರು.