Connect with us

BANTWAL

ನವರಾತ್ರಿಯಲ್ಲಿ ಅಶಕ್ತರಿಗೆ ಮಿಡಿಯುವ ಬಂಟ್ವಾಳ ದೇವದಾಸ್ ‘ಅವತಾರ್’

ಬಂಟ್ವಾಳ: ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಅವರು ಕಳೆದ ಮೂರು ವರ್ಷಗಳಲ್ಲಿ ವೇಷ ಹಾಕಿ ಸಂಗ್ರಹಗೊಂಡ ಮೊತ್ತವನ್ನು ಅಶಕ್ತರಿಗೆ ಹಂಚಿದ್ದು, ಈ ಬಾರಿ ನಾಲ್ಕನೇ ವರ್ಷದಲ್ಲಿ ಇಂಗ್ಲೀಷ್ ಚಿತ್ರ ಅವತಾರ್ ರೀತಿ ವೇಷ ಹಾಕಿ ಮೂವರು ಅಶಕ್ತರಿಗೆ ನೆರವಾಗಲು ಸುತ್ತಾಟ ಆರಂಭಿಸಿದ್ದಾರೆ.


ಅ.18ರಂದು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಸುತ್ತಾಟ ಆರಂಭಿಸಿದ್ದು, ವಿಜಯ ದಶಮಿವರೆಗೆ ವೇಷ ಹಾಕಿ ಸಾಧ್ಯವಾದಷ್ಟು ಮೊತ್ತವನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ.

ಮಣಿನಾಲ್ಕೂರು ಗ್ರಾಮದ ಕ್ಯಾನ್ಸರ್ ಪೀಡಿತರು, ಬಡ ಕುಟುಂಬದ ಯುವತಿಯ ಶಿಕ್ಷಣ, ಕೋಮಾದಲ್ಲಿರುವ ಬೆಳ್ತಂಗಡಿಯ ವ್ಯಕ್ತಿಯೊಬ್ಬರಿಗೆ ಸಂಗ್ರಹಗೊಂಡ ಮೊತ್ತವನ್ನು ನೀಡುವುದಾಗಿ ತಿಳಿಸಿದ್ದಾರೆ.
ಕಳೆದ ಬಾರಿ ಪೂರ್ತಿ ನವರಾತ್ರಿಯ ದಿನಗಳಲ್ಲಿ ವೇಷ ಹಾಕಿ ಸುಮಾರು 57 ಸಾವಿರ ಮೊತ್ತವನ್ನು ಸಂಗ್ರಹಿಸಿ ಎರಡು ಅಶಕ್ತ ಕುಟುಂಬಗಳಿಗೆ ನೀಡಿ ಉಳಿದ ಮೊತ್ತವನ್ನು ಸರಪಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ನೀಡಿದ್ದರು. ತನ್ನ ವೇಷಕ್ಕೆ ಹೋಲುವ ರೀತಿಯಲ್ಲಿ ಬೈಕನ್ನು ಕೂಡ ವಿನ್ಯಾಸಗೊಳಿಸಿ ಅದರ ಮೂಲಕ ಸುತ್ತಾಟ ನಡೆಸುತ್ತಾರೆ.

https://youtu.be/cDyLHj74kT4

Share Information
Continue Reading
Advertisement
Click to comment

Leave a Reply

Your email address will not be published. Required fields are marked *