Connect with us

    BANTWAL

    ಅಕ್ರಮ ಮರಳು ಅಡ್ಡೆಗೆ ಮಧ್ಯರಾತ್ರಿ ದಾಳಿ ನಡೆಸಿದ ಬಂಟ್ವಾಳ ತಹಶಿಲ್ದಾರ್ ರಶ್ಮಿ

    ಬಂಟ್ವಾಳ ಜೂನ್ 26: ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಮರಳು ಅಡ್ಡೆಗೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಶುಕ್ರವಾರ ಮಧ್ಯರಾತ್ರಿ ದಾಳಿ ನಡೆಸಿ ಮರಳುಗಾರಿಕೆಗೆ ಬಳಸಲಾಗುತ್ತಿರುವ ಆರೋಪದಲ್ಲಿ ಎರಡು ಬೋಟ್ ಮತ್ತು ಟಿಪ್ಪರ್ ಅನ್ನು ವಶಪಡಿಸಿಕೊಳ್ಳಲಾಗಿದೆ.


    ಪಾಣೆ ಮಂಗಳೂರು ಹಳೆಯ ಸೇತುವೆ ಅಡಿ ರಾತ್ರಿ ಸಂದರ್ಭ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದ ಹಿನ್ನಲೆ ಶುಕ್ರವಾರ ಮಧ್ಯರಾತ್ರಿ ಸುಮಾರು 12.30ರ ಬಳಿಕ ಈ ಕಾರ್ಯಾಚರಣೆಯನ್ನು ಕಂದಾಯ ಇಲಾಖೆಯ ತಂಡ ಅರಣ್ಯ ಇಲಾಖೆ ಮತ್ತು ನಗರ ಠಾಣೆ ಪೊಲೀಸರ ಸಹಯೋಗದೊಂದಿಗೆ ನಡೆಸಿದ್ದು, ದಾಳಿ ವೇಳೆ ಇಬ್ಬರು ಪರಾರಿಯಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *