BANTWAL
ಬಂಟ್ವಾಳ – ರಸ್ತೆ ಬದಿ ಚರಂಡಿಗೆ ಬಿದ್ದ ಸ್ಕೂಟರ್ – ಸವಾರ ಸಾವು

ಬಂಟ್ವಾಳ ಎಪ್ರಿಲ್ 16: ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಪಚ್ಚಿನಡ್ಕ ಎಂಬಲ್ಲಿ ಬುಧವಾರ ನಡೆದಿದೆ. ಮೃತರನ್ನು ಕಳ್ಳಿಗೆ ಗ್ರಾಮದ ನಿವಾಸಿ ಮೆಟ್ರೋಯಿ ಡೇಸಾ (24) ಎಂದು ಗುರುತಿಸಲಾಗಿದೆ.
ಮೆಟ್ರೋಯಿ ಡೇಸಾ ಅವರು ಬ್ರಹ್ಮರಕೋಟು ಕಡೆಯಿಂದ ಪಚ್ಚಿನಡ್ಕ ಕಡೆಗೆ ಬರುತ್ತಿದ್ದ ವೇಳೆ ದ್ವಿಚಕ್ರ ವಾಹನ ತೀರಾ ರಸ್ತೆಯ ಬದಿಗೆ ಸರಿದು ಬಳಿಕ ನಿಯಂತ್ರಣ ಕಳೆದುಕೊಂಡು ಸ್ಕೂಟರ್. ಸಮೇತ ಚರಂಡಿಗೆ ಬಿದ್ದಿದ್ದಾರೆ. ಈ ಪರಿಣಾಮ ಅವರಿಗೆ ಗಾಯಗಳಾಗಿದ್ದು, ಕೊಡಲೇ ಸ್ಥಳೀಯ ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
