BANTWAL
ಬಂಟ್ವಾಳ – ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಕಾರು – ಮಹಿಳೆ ಸಾವು

ಬಂಟ್ವಾಳ ಮೇ 16: ಪಾದಚಾರಿ ಮಹಿಳೆಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಸಾವನಪ್ಪಿದ ಘಟನೆ ವಗ್ಗ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಾಡಬೆಡ್ಡು ನಿವಾಸಿ ಸೇಸಮ್ಮ ಎಂದು ಗುರುತಿಸಲಾಗಿದೆ.
ಸೇಸಮ್ಮ ಅವರು ಮನೆಯಿಂದ ವಗ್ಗ ಪೇಟೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ. ಇನ್ನು ಬಡಕುಟುಂಬದ ಮಹಿಳೆಯಾಗಿರುವ ಈಕೆ ಸ್ವಸಹಾಯ ಸಂಘದ ಹಣವನ್ನು ಪಾವತಿ ಮಾಡಲು ಬರುತ್ತಿದ್ದ ವೇಳೆ ಮಂಗಳೂರಿನ ಕಡೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಮಹಿಳಾ ವೈದ್ಯೆ ಅಜಾಗರೂಕತೆಯ ಚಾಲನೆ ಮಾಡಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಗಂಭೀರವಾದ ಗಾಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿಲು ಕೊಂಡುಹೋಗಲಾಯಿತಾದರೂ ದಾರಿಮಧ್ಯೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚೆಗೆ ಈಕೆಯ ಪತಿಗೆ ವಗ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದೇ ರೀತಿ ರಿಕ್ಷಾವೊಂದು ಡಿಕ್ಕಿಯಾಗಿದ್ದು, ಬಳಿಕ ಕಾಲಿಗೆ ಗಂಭೀರವಾದ ಗಾಯವಾಗಿ ನಡೆಯಲಾರದೆ ಮನೆಯಲ್ಲಿದ್ದು,ಸ್ವಲ್ಪ ಸಮಯದ ಬಳಿಕ ನಿಧನರಾಗಿದ್ದಾರೆ.