LATEST NEWS
ಉಳ್ಳಾಲ ಜಾತ್ರೆಯಲ್ಲಿ ವಿವಾದಾತ್ಮಕ ಪೋಸ್ಟರ್ – ಕ್ರಮಕ್ಕೆ ಶಾಸಕ ಖಾದರ್ ಆಗ್ರಹ
ಮಂಗಳೂರು : ಜಾತ್ರೆಯೊಂದರಲ್ಲಿ ಹಿಂದೂಯೇತರ ವ್ಯಾಪಾರಿಗಳು ದೂರ ಇರುವಂತೆ ಪೋಸ್ಟರ್ ಒಂದು ಹಾಕಲಾಗಿದ್ದು, ವಿವಾದ ಸೃಷ್ಠಿಸಿದ್ದು, ಶಾಸಕ ಖಾದರ್ ಬ್ಯಾನರ್ ಹಾಕಿದ ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಉಳ್ಳಾಲದ ದೇವಾಲಯವೊಂದರ ಎರಡು ದಿನಗಳ ಜಾತ್ರೆಯಿಂದ ಹಿಂದೂಯೇತರ ವ್ಯಾಪಾರಿಗಳು ದೂರು ಇರುವಂತೆ ಪೋಸ್ಟರ್ ವೊಂದನ್ನು ವಿಶ್ವ ಹಿಂದು ಪರಿಷತ್ ಬಜರಂಗದಳ ಉಳ್ಳಾಲ ಬೈಲ್ ನ ಮೈದಾನವೊಂದರಲ್ಲಿ ಹಾಕಿತ್ತು.
ಈ ನೆಲದ ದೈವ ದೇವರುಗಳನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು ಎಂದು ಅದರಲ್ಲಿ ಬರೆಯಲಾಗಿತ್ತು. ಆದಾಗ್ಯೂ, ಈ ವಿವಾದಾತ್ಮಕ ಫೋಸ್ಟರ್ ಸಂಗತಿ ತಿಳಿದುಬಂದ ಕೂಡಲೇ ಸ್ಥಳೀಯ ಪೊಲೀಸರು ಫೋಸ್ಟರ್ ತೆರವುಗೊಳಿಸಿದ್ದಾರೆ. ವಾರ್ಷಿಕ ಜಾತ್ರೆ ನಾಳೆಯಿಂದ ಆರಂಭವಾಗಲಿದೆ.
ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್, ಈ ಫೋಸ್ಟರ್ ಹಿಂದಿರುವ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವಿವಾದಾತ್ಮಕ ಪೋಸ್ಟರ್ ನಿಂದ ಅಂತರ ಕಾಪಾಡಿಕೊಳ್ಳುವಂತೆ ದೇವಾಲಯ ಸಮಿತಿಯೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.