Connect with us

    LATEST NEWS

    ಇಸ್ಲಾಮಿಕ್ ರಾಷ್ಟ್ರವಾಗಿ ಬಾಂಗ್ಲಾದೇಶ -ಸಂವಿದಾನದಿಂದ ಜಾತ್ಯತೀತ ಪದ ತೆಗೆಯಲು ಆಗ್ರಹ

    ಢಾಕಾ ನವೆಂಬರ್ 15: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಿಗೊಳಿಸಿದ ಬಳಿಕ ಇದೀಗ ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುವತ್ತ ಹೆಜ್ಜೆಹಾಕುತ್ತಿದೆ. ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಲು ಬಾಂಗ್ಲಾದೇಶದ ಅಟಾರ್ನಿ ಜನರಲ್‌ ಅಸದುಜ್ಜಮಾನ್‌ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದಾರೆ.


    ಬಾಂಗ್ಲಾದೇಶದಲ್ಲಿ ಶೇ.90ರಷ್ಟು ಮುಸ್ಲಿಮರಿದ್ದಾರೆ. ಹಾಗಾಗಿ ಸಂವಿಧಾನದಲ್ಲಿರುವ ಜಾತ್ಯತೀತ ಪದವನ್ನು ತೆಗೆದು ಹಾಕಬೇಕು ಎಂದು ಬಾಂಗ್ಲಾದೇಶದ ಅಟಾರ್ನಿ ಜನರಲ್‌ ಅಸದುಜ್ಜಮಾನ್‌ ವಾದಿಸಿದ್ದಾರೆ.
    ಜತೆಗೆ, ಶೇಖ್‌ ಮುಜಿಬುರ್‌ ರೆಹಮಾನ್‌ ಅವರಿಗೆ ಬಂಗಾಬಂಧು (ಬಾಂಗ್ಲಾದೇಶದ ರಾಷ್ಟ್ರಪಿತ) ಬಿರುದನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ನ ಮುಂದೆ ತಮ್ಮ ವಾದ ಮಂಡಿಸಿದ ಅಸದುಜ್ಜಮಾನ್‌, ದೇಶದ ಪ್ರಜಾಪ್ರಭುತ್ವ ಮತ್ತು ಐತಿಹಾಸಿಕ ಮೌಲ್ಯಗಳೊಂದಿಗೆ ಸಂವಿಧಾನವನ್ನು ಸಮೀಕರಿಸುವ ಅಗತ್ಯವಿದೆ. “ಹಿಂದೆ, ಅಲ್ಲಾನಲ್ಲಿ ನಿರಂತರ ನಂಬಿಕೆ ಇತ್ತು ನಮಗೆ ಅದು ಮೊದಲಿನಂತೆಯೇ ಮುಂದುವರಿಯಬೇಕು. ರಾಜ್ಯವು ಎಲ್ಲಾ ಧರ್ಮಗಳ ಆಚರಣೆಯಲ್ಲಿ ಸಮಾನ ಹಕ್ಕುಗಳು ಮತ್ತು ಸಮಾನತೆಯನ್ನು ಖಾತ್ರಿಪಡಿಸುತ್ತದೆ ಎಂದು ಸಂವಿಧಾನದ 2ನೇ ಪರಿಚ್ಛೇದದಲ್ಲಿ ತಿಳಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *