KARNATAKA
ಬಾಳೆಹೊನ್ನೂರು: ಕಾಡಾನೆ ತುಳಿದು ಕಾರ್ಮಿಕ ಮಹಿಳೆ ಸಾವು

ಚಿಕ್ಕಮಗಳೂರು, ಜುಲೈ 24: ಕಾಡಾನೆ ತುಳಿದು ದಾವಣೆಗೆರೆ ಜಿಲ್ಲೆಯ ಕಾರ್ಮಿಕ ಮಹಿಳೆ ಮೃತಪಟ್ಟಿದ್ದಾರೆ. ಹೊನ್ನಾಳಿ ತಾಲ್ಲೂಕಿನ ವಟ್ಟಪುರ ಸಾಸ್ಟೆಹಳ್ಳಿಯ ಹಾಲೇಶ್ ಎಂಬುವರ ಪತ್ನಿ ಅನಿತಾ (25) ಮೃತರು.

ಸಾಂದರ್ಭಿಕ ಚಿತ್ರ
ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದ ಶಶಿಶೇಖರ್ ಎಂಬವರ ಕಾಫಿ ತೋಟದ ಕೆಲಸಕ್ಕೆಂದು ಬಂದಿದ್ದರು. ಕಾರ್ಮಿಕರ ಲೈನ್ ಮನೆಗೆ ಹೋಗುವ ದಾರಿಯಲ್ಲಿ ಕಾಡಾನೆ ಎದುರಾಗಿ ತುಳಿದಿದೆ.

ತೀವ್ರವಾಗಿ ಗಾಯಗೊಂಡಿದ್ದ ಅನಿತಾ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.