DAKSHINA KANNADA
ಬಲ್ಮಂಜ – ಕರೆಂಟ್ ತಗುಲಿ ವ್ಯಕ್ತಿ ಸಾವು….!!

ಪುತ್ತೂರು ಅಕ್ಟೋಬರ್ 31: ತೋಟಕ್ಕೆ ತೆರಳಿದ್ದ ವ್ಯಕ್ತಿಗೆ ಕರೆಂಟ್ ತಗುಲಿ ಸಾವನಪ್ಪಿರುವ ಘಟನೆ ಬಲ್ಮಂಜ ಗ್ರಾಮದ ಕಂರ್ಬಿತ್ತಿಲ್ ಎಂಬಲ್ಲಿ ನಡೆದಿದೆ. ಮೃತರನ್ನು ಕಲ್ಮಂಜ ಗ್ರಾಮದ ಕರಿಯನೆಲ ಕಂರ್ಬಿತ್ತಿಲ್ ನಿವಾಸಿ ಉದಯ ಗೌಡ (43) ಎಂದು ಗುರುತಿಸಲಾಗಿದೆ. ಉದಯ ಗೌಡ ಅವರ ಸಾವಿಗೆ ವಿದ್ಯುತ್ ಅವಘಡವೇ ಕಾರಣ ಎಂದು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿ, ಮೃತರ ಸಂಬಂಧಿ ಹರೀಶ ಗೌಡ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ನಿವಾಸಿಗಳಾದ ಹರೀಶ ಮತ್ತು ಇತರರು ತೋಟಕ್ಕೆ ಬರುವ ಪ್ರಾಣಿಗಳನ್ನು ಓಡಿಸಲು ಅಕ್ರಮವಾಗಿ ಪಂಪ್ ಸೆಂಟ್ ನಿಂದ ಕರೆಂಟ್ ಬಳಿ ತೋಟದ ಸುತ್ತ ವಿದ್ಯುತ್ ತಂತಿ ಬೇಲಿ ಆಳವಡಿಸಿದ್ದರು. ಮನೆಯಿಂದ ತೋಟಕ್ಕೆ ಹೋಗಿದ್ದ ಉದಯ ಅವರು ಕಾಲಿಗೆ ಈ ವಿದ್ಯುತ್ ತಂತಿ ತಗುಲಿ ಅವರು ಸಾವನಪ್ಪಿದ್ದಾರೆ. ಈ ಸಂಬಂಧ ಹರೀಶ ಗೌಡ ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇದು ಹರೀಶ ಗೌಡ ಅವರಿಗೆ ಅಪಾಯದ ಅರಿವಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮಾನವ ಜೀವ ಹಾನಿಗೆ ಕಾರಣವಾದ ಘಟನೆ ಎಂದು ಉಲ್ಲೇಖಿಸಲಾಗಿದೆ.
