LATEST NEWS
ಕರಾವಳಿಯಾದ್ಯಂತ ಸಂಭ್ರಮದ ಬಕ್ರಿದ್ ಆಚರಣೆ

ಕರಾವಳಿಯಾದ್ಯಂತ ಸಂಭ್ರಮದ ಬಕ್ರಿದ್ ಆಚರಣೆ
ಮಂಗಳೂರು ಅಗಸ್ಟ್ 22: ವಿಶ್ವ ಭಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕರಾವಳಿಯಲ್ಲಿಂದು ಭಕ್ತಿ ಹಾಗೂ ಶ್ರಧ್ದೆಯಿಂದ ಆಚರಿಸಲಾಯಿತು.
ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯ. ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರ ಇಸ್ಮಾಯಿಲ್ ಅವರನ್ನೇ ಬಲಿ ಕೊಡಲು ಸಿದ್ಧರಾದ ‘ತ್ಯಾಗ’ದ ಪ್ರತೀಕವಾಗಿ ‘ಬಕ್ರೀದ್’ ಆಚರಿಸಲಾಗುತ್ತಿದೆ. ಶುಭ್ರ ವಸ್ತ್ರಗಳನ್ನು ಧರಿಸಿದ ಮುಸ್ಲೀಂ ಭಾಂದವರು ಇಂದು ಮುಂಜಾನೆ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಹಾಗೂ ನಮಾಜಿನಲ್ಲಿ ತೊಡಗಿದರು.

ಮಂಗಳೂರಿನ ಇತಿಹಾಸ ಪ್ರಸಿದ್ದ ಬಾವುಟಗುಡ್ಡ ಇದ್ಗಾ ಮಸೀದಿಯಲ್ಲೂ ಇಂದು ಸಾವಿರಾರು ಮುಸ್ಲಿಂ ಭಾಂದವರು ಸೇರಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ಸಚಿವ ಯು,ಟಿ. ಖಾದರ್ ಸೇರಿದಂತೆ ಅನೇಕ ಗಣ್ಯರು ಈ ಸಾಮೂಹಿಕ ನಮಾಜ್ ನಲ್ಲಿ ಪಾಲ್ಗೊಂಡರು.
ನೆರೆಯ ರಾಜ್ಯ ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿನ ಅತಿವೃಷ್ಟಿಯಿಂದ ಭಾರಿ ಸಾವು- ನೋವುಗಳನ್ನು ಸಂಭವಿಸಿರುವ ಹಿನ್ನೆಲೆಯಲ್ಲಿ ಬಕ್ರಿದ್ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ.