LATEST NEWS
ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಗೆ ಬಹಿರಂಗ ಜೀವ ಬೆದರಿಕೆ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಗೆ ಬಹಿರಂಗ ಜೀವ ಬೆದರಿಕೆ
ಮಂಗಳೂರು ಮೇ 27: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಳಿನ್ ಕುಮಾರ್ ಕಟೀಲ್ ವಿರುದ್ದ ಸೋತ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈಗೆ ಬಹಿರಂಗವಾಗಿ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಹಿರಂಗ ವಾಗಿ ಬೆದರಿಕೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೇ 23ರ ಮತ ಎಣಿಕೆಯ ದಿನದಂದು ಸಂಜೆ ಮಂಗಳೂರು ಹೊರವಲಯದ ಪೊಳಲಿ ಸಮೀಪದ ಬಡಕಬೈಲ್ ಎಂಬಲ್ಲಿ ನಡುರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ನಡೆದಿತ್ತು.

ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ವಿಥುನ್ ರೈ ಭಜರಂಗದಳವನ್ನು ನಿಶೇಧಿಸುವ ಹೇಳಿಕೆಯನ್ನು ನೀಡಿದ್ದರು. ಇದನ್ನೇ ತಮ್ಮ ವಿಜಯೋತ್ಸವ ಸಂದರ್ಭದಲ್ಲಿ ಬಳಸಿಕೊಂಡ ಕಾರ್ಯಕರ್ತರು ಭಜರಂಗದಳವನ್ನು ನಿಶೇಧಿಸುವ ಮಾತೆತ್ತಿದರೆ, ಕೈ, ಕಾಲು ಇರಲ್ಲ, ಮತ್ತೂ ಮೀರಿದರೆ ತಲೆಯೂ ಇರಲ್ಲ ಎನ್ನುವ ಬೆದರಿಕೆಯ ಘೋಷಣೆಗಳನ್ನು ಹಾಕಿದ್ದಾರೆ.
ಓರ್ವ ಬಜರಂಗದಳ ಕಾರ್ಯಕರ್ತ ಈ ಘೋಷಣೆ ಹಾಕಿದ್ದು ಅದಕ್ಕೆ ಇತರ ಕಾರ್ಯಕರ್ತರು ಧ್ವನಿಗೂಡಿಸಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸ್ ಇಲಾಖೆ ಕ್ರಮತೆಗೆದುಕೊಳ್ಳುವಂತೆ ಆಗ್ರಹಿಸಲಾಗುತ್ತಿದೆ.