LATEST NEWS
ಕೊರೊನಾದಿಂದ ಮೃತಪಟ್ಟ 2 ತಿಂಗಳ ಮಗುವಿನ ಅಂತ್ಯಕ್ರಿಯೆ ನಡೆಸಿದ ಬಜರಂಗದಳ ಕಾರ್ಯಕರ್ತರು

ಮಂಗಳೂರು ಜುಲೈ 18: ಪುತ್ತೂರು ತಾಲೂಕಿನ ಎರಡು ತಿಂಗಳ ಮಗು ಒಂದು ಇಂದು ಕೊರೊನಾದಿಂದ ಮೃತಪಟ್ಟಿದೆ. ಮೃತಪಟ್ಟ 2 ತಿಂಗಳ ಮಗುವಿಗೆ ಕಳೆದ ಕೆಲವು ದಿನಗಳಿಂದ ವಾಂತಿ ಹಾಗೂ ಕಫದ ಸಮಸ್ಯೆಯಿಂದ ಬಳಲುತ್ತಿತ್ತು. ಈ ಹಿನ್ನಲೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಿನ ಸ್ಥಿತಿ ಗಂಭೀರವಾದ ಹಿನ್ನಲೆ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನಪ್ಪಿದೆ.
ಮಗುವಿನ ಗಂಟಲು ದ್ರವದ ಪರೀಕ್ಷೆಯ ವರದಿ ಬಂದಿದ್ದು, ಮಗುವಿಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಗುವಿನ ಮೃತ ದೇಹವನ್ನು ದೂರದ ಪುತ್ತೂರಿಗೆ ಕೊಂಡು ಹೋಗಿ ದಫನ ಮಾಡಲು ತಾಂತ್ರಿಕ ಅಡಚಣೆಗಳು ಎದುರಾದ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಭಜರಂಗ ದಳದ ಕಾರ್ಯಕರ್ತರು ಮುಂದಾಳತ್ವ ವಹಿಸಿ ಮಂಗಳೂರಿನಲ್ಲೇ ಅಂತ್ಯ ಕ್ರೀಯೆ ನಡೆಸಲು ಮುಂದಾದರು.

ಈ ಹಿನ್ನಲೆ ಮಗುವನ್ನು ಕೊರೊನಾ ಮಾರ್ಗದರ್ಶಿ ಸೂತ್ರದನ್ವಯ ಮಂಗಳೂರಿನ ನಂದಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಕೊರೊನಾ ನಿಯಮಾವಳಿಗಳಂತೆ ಸುರಕ್ಷತೆ ಕಿಟ್ ಗಳನ್ನು ಬಳಸಿ ಮಗುವಿನ ಅಂತ್ಯ ಸಂಸ್ಕಾರ ನೆರವೆರಿಸಿದರು.