Connect with us

    LATEST NEWS

    ಅನಾರೋಗ್ಯದಿಂದ ಬಜರಂಗದಳ ಕಾರ್ಯಕರ್ತ ಸಾವು…ವೈದ್ಯರ ನಿರ್ಲಕ್ಷ ಆರೋಪ

    ಮಂಗಳೂರು ಮೇ 15: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಜರಂಗದಳದ ಕಾರ್ಯಕರ್ತ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರನ್ನು ಬಜರಂಗದಳ ಕಾರ್ಯಕರ್ತ ಬಂಟ್ವಾಳ ಸರಪಾಡಿ ನಿವಾಸಿ ನಿತಿನ್ ಯಾನೆ ರೂಪೇಶ್ ಪೂಜಾರಿ ಎಂದು ಗುರುತಿಸಲಾಗಿದೆ.


    ರೂಪೇಶ್ ಪೂಜಾರಿ 3 ದಿನಗಳ ಹಿಂದೆ ಹೊಟ್ಟೆನೋವಿನಿಂದ ವೆನ್ಲೋಕ್ ಆಸ್ಪತ್ರೆ ಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ರೂಪೇಶ್ ಪೂಜಾರಿ ಅವರ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣ ಎಂದು ಬಜರಂಗದಳದ ಕಾರ್ಯಕರ್ತರು ಆರೋಪ ಮಾಡಿದ್ದಾರೆ.
    ಸಮಯಕ್ಕೆ ಸರಿಯಾಗಿ ಆಸ್ಪತ್ರೆಯ ವೈದರು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದರು ವೆಂದು ಭಜರಂಗದಳದ ಕಾರ್ಯಕರ್ತರು ಆರೋಪ ಮಾಡಿದ್ದು. ಬಜರಂಗದಳ ಮತ್ತು ವೆನ್ಲಾಕ್ ವೈದರ ನಡುವೆ ಮಾತಿನಚಕಮಕಿ ನಡೆದಿದೆ.


    ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿ. ಕಾರ್ಯಕರ್ತರಿಗೆ ದೂರು ನೀಡಲು ಹೇಳಿದರು. ರೂಪೇಶ್ ನಿರ್ಲಕ್ಷದ ಸಾವಿಗೆ ಕಾರಣರಾದ ವೈದರನ್ನು ಬಂದಿಸದಿದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನ ನೀಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *