ಕಾರ್ಕಳದ ಪಳ್ಳಿಯ ರಂಗನಪಲ್ಕೆ ಸಮೀಪ ಕಾಡಿನಲ್ಲಿ ಆಗಸ್ಟ್ ನಲ್ಲಿ ನಡೆದ ಗ್ಯಾಂಗ್‌ರೇಪ್ ಕೇಸಿನಲ್ಲಿ ಅಲ್ತಾಫ್ ಒಂದನೇ ಆರೋಪಿಯಾಗಿದ್ದ. ಈ ಪ್ರಕರಣ ರಾಜ್ಯಾದ್ಯಾಂತ ತೀವ್ರ ಸಂಚಲನ ಸೃಷ್ಟಿಸಿತ್ತು. ಅಲ್ತಾಫ್ ಪರವಾಗಿ ಕಾರ್ಕಳದ ವಕೀಲ ರವಿಶಂಕರ್ ಬಿ.ಎಂ. ವಾದಿಸಿದ್ದರು. ಕುಕ್ಕುಂದೂರು ಅಯ್ಯಪ್ಪ ನಗರದ ಗರಡಿ ಸಮೀಪದ ಪರಿಶಿಷ್ಟ ಪಂಗಡದ 21 ವರ್ಷದ ಯುವತಿಯನ್ನು ಪರಿಚಿತನೇ ಆಗಿದ್ದ ಟಿಪ್ಪರ್ ಚಾಲಕ ಅಲ್ತಾಫ್ ಕಾರಿನಲ್ಲಿ ಕರೆದುಕೊಂಡು ಹೋಗಿ ಇಬ್ಬರು ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದ. ಕಾರ್ಕಳದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಈ ಪ್ರಕರಣದ ಹಿನ್ನೆಲೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆದಿದ್ದವು. ಇದೀಗ ಆರೋಪಿ ಅಲ್ತಾಫ್ ಗೆ ಜಾಮೀನು ಮಂಜೂರಾಗಿದೆ.