Connect with us

DAKSHINA KANNADA

ಉಳ್ಳಾಲದಲ್ಲಿ ಸಮುದ್ರರಾಜನ ರೌದ್ರವತಾರ : ಕಡಲು ಸೇರುತ್ತಿರುವ ಮನೆ-ಮಠಗಳು

ಉಳ್ಳಾಲದಲ್ಲಿ ಸಮುದ್ರರಾಜನ ರೌದ್ರವತಾರ : ಕಡಲು ಸೇರುತ್ತಿರುವ ಮನೆ-ಮಠಗಳು

ಹಾರ ತುರಾಯಿ ತಗೊಳ್ಳುವುದರಲ್ಲಿಯೇ ಬಿಸಿಯಾದ ಖಾದರ್ ಸಾಹೇಬರು

ಮಂಗಳೂರು. ಜುಲೈ 18: ಕರಾವಳಿಯಲ್ಲಿ ಮುಂಗಾರು ಸ್ವಲ್ಪ ಮಟ್ಟಿಗೆ ಕ್ಷೀಣಿಸಿದೆ ಆದರೆ ಸಮುದ್ರ ರಾಜ ಮಾತ್ರ ರೌದ್ರವತಾರ ತಾಳಿದ್ದಾನೆ.

ಸಮುದ್ರ ರಾಜನ ಅಬ್ಬರಕ್ಕೆ ಅಕ್ಷರಶ ಕರಾವಳಿ ನಲುಗಿ ಹೋಗಿದೆ. ಪ್ರಮುಖವಾಗಿ ಮಂಗಳೂರಿನ ಉಳ್ಳಾಲ ಭಾಗದಲ್ಲಿ ಸಮುದ್ರದ ಅಬ್ಬರಕ್ಕೆ ತೀರದಲ್ಲಿರುವ ಮನೆ ಮಠಗಳು ಒಂದೋದಾಗಿ ಸಮುದ್ರದ ಒಡಲು ಸೇರುತ್ತಿವೆ.

ಸಮುದ್ರದ ಅಲೆಗಳ ಅಬ್ಬರಕ್ಕೆ ತೀರದಲ್ಲಿರುವ ಮನೆಗಳು ಸಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿವೆ. ಉಳ್ಳಾಲದ ಇದೀಗ ಮತ್ತೆ ಎಂಟು ಮನೆಗಳು ಧಾರಶಾಯಿಯಾಗಿವೆ.

ಸಮುದ್ರದ ಅಬ್ಬರಕ್ಕೆ ಈ ಭಾಗದ ಜನರು ನಲುಗಿ ಹೋಗಿದ್ದು ,ಯಾವಾಗ ಏನಾಗುತ್ತೋ‌ ಅನ್ನೋ ಜೀವ ಭಯದಿಂದಲೇ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಳ್ಳಾಲದ ಕೈಕೋ,‌ ಕಿಲೆರಿಯಾ ನಗರ, ಮುಕ್ಕಚ್ಚೇರಿ ಪ್ರದೇಶಗಳಲ್ಲಿ ಸಮುದ್ರ ರಾಜನ ಆರ್ಭಟ ಜೋರಾಗಿದೆ.

15 ದಿನಗಳ ಹಿಂದೆ ಆರಂಭವಾದ ಸಮುದ್ರದ ಅಬ್ಬರ ಇಂದು ಕೂಡ ಮುಂದುವೆರೆದಿದೆ. ಪರಿಣಾಮ ಈ ಭಾಗದಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದೆ. 4 -5 ದಿನಗಳ ಹಿಂದೆ ಉಳ್ಳಾಲದ ಸೋಮೇಶ್ವರ -ಉಚ್ಚಿಲ ಪ್ರದೇಶದ ಜನರಲ್ಲಿ ಭೀತಿ ಹುಟ್ಟಿಸಿದ್ದ ಸಮುದ್ರದ ಆಳೆತ್ತರದ ಅಲೆಗಳು ಕಳೆರಡು ದಿನಗಳಿಂದ ಉಳ್ಳಾಲ ನಗರ ಪ್ರದೇಶಕ್ಕೂ ವ್ಯಾಪಿಸಿದೆ.

ಈಗಾಗಲೇ 8 ಮನೆಗಳು ಸಮುದ್ದರದ ಒಡಲು ಸೇರಿಕೊಂಡಿದ್ದರೆ. 30 ಕ್ಕೂ ಅಧಿಕ ಮನೆಗಳು ಅಪಾಯದಲ್ಲಿದ್ದು ಯಾವುದೇ ಸಂದರ್ಭದಲ್ಲಿ ಸಮುದ್ರ ಪಾಲಾಗುವ ಆತಂಕದಲ್ಲಿವೆ.

ಈ ವ್ಯಾಪ್ತಿಯಲ್ಲಿ ಕಡಲ್ಕೊರೆತ ತಡೆಯಲು ಜಿಲ್ಲಾಡಳಿತದ ವತಿಯಿಂದ ಭಾರೀ ಕಲ್ಲುಗಳನ್ನು ಹಾಸಲಾಗಿದ್ದರೂ, ಅಲೆಗಳ ಆರ್ಭಟಕ್ಕೆ ಭಾರೀ ಗಾತ್ರದ ಕಲ್ಲುಗಳು ಒಂದೊಂದಾಗಿ ಕಡಲ ಒಡಲು ಸೇರುತ್ತಿವೆ. ಸುಮಾರು 10 ವರ್ಷಗಳ ನಂತರ ಈ ಭಾಗದಲ್ಲಿ 10 ರಿಂದ 15 ಅಡಿ ಎತ್ತರದ ರಕ್ಕಸ ಗಾತ್ರದ ಅಲೆಗಳು ಭಾರಿ ಶಬ್ದದೊಂದಿಗೆ ದಡಕ್ಕೆ ಅಪ್ಪಳಿಸುತ್ತಿದ್ದು ಭಯ ಹುಟ್ಟಿಸುವಂತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ .
ಇನ್ನು ಇಷ್ಟೆಲ್ಲ ಅನಾಹುತಗಳು ಇಲ್ಲಿ ಸಂಭವಿಸಿದ್ದರೂ ಈ ಭಾಗದ ಶಾಸಕರು ಹಾಗೂ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಯು.ಟಿ. ಖಾದರ್ ಇದುವರೆಗೂ ಭೇಟಿಯೇ ನೀಡಿಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಶಾಶ್ವತ ಪರಿಹಾರ ನೀಡಿ ಈ ಭಾಗದಲ್ಲಿ ಕಡಲ್ಕೊರೆತದಿಂದ ಮುಕ್ತಿ ನೀಡಿ ಎಂಬ ಜನರ ಮನವಿಗೆ ಕವಡೆ ಕಿಮ್ಮತ್ತಿನ ಬೆಲೆಯನ್ನೂ ನೀಡುತ್ತಿಲ್ಲ ಎಂದು ಸಚಿವ ಯು. ಟಿ ಖಾದರ್ ವಿರುದ್ದ ಜನತೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *