Connect with us

    DAKSHINA KANNADA

    UAE ಯ ರಂಗಸ್ಥಳದಲ್ಲಿ ಮತ್ತೊಮ್ಮೆ ಝೇಂಕರಿಸಲಿದೆ ಬಡಗು ತಿಟ್ಟು ಯಕ್ಷಯಾಮಿನಿ

    ದುಬೈ: ಈ ವರ್ಷದ ಬಡಗುತಿಟ್ಟು ಯಕ್ಷಗಾನ ಯುಎಇ ಯ  ತಿರುಗಾಟ ಕಾರ್ಯಕ್ರಮಗಳು  ” ಯಕ್ಷ ಯಾಮಿನಿ  ” ಅಡಿಯಲ್ಲಿ ಸೆಪ್ಟೆಂಬರ್ 21ಕ್ಕೆ ದುಬೈಯಲ್ಲಿ ಮತ್ತು ಸೆಪ್ಟೆಂಬರ್ 22 ಕ್ಕೆ ಅಬುಧಾಬಿಯಲ್ಲಿ ರಂಗೇರಲಿದೆ .

    ದಿನಾಂಕ 21-9-2024 ರ ಶನಿವಾರ ಸಂಜೆ 5 ಗಂಟೆಯಿಂದ ದುಬೈ ಯ  ಜೆಮ್ಸ್ ನ್ಯೂ  ಮಿಲೇನಿಯಂ ಶಾಲೆ , ಅಲ್ ಖೈಲ್ ಗೇಟ್ ನಲ್ಲಿ  “ವೀರ ಬರ್ಬರಿಕ”  ಎಂಬ ಪ್ರಸಂಗವನ್ನು ಮತ್ತು ದಿನಾಂಕ  22-9-2024 ರ ಭಾನುವಾರ ಸಂಜೆ 3 ಗಂಟೆಯಿಂದ ಅಬುಧಾಬಿಯ ಜೆಮ್ಸ್  ವರ್ಲ್ಡ್ ಅಕಾಡೆಮಿ ಯಲ್ಲಿ  “ಭೀಷ್ಮ ವಿಜಯ “ ಎಂಬ ಪ್ರಸಂಗವನ್ನು ತಾಯ್ನಾಡಿನಿಂದ ಆಗಮಿಸುವ ಪ್ರಬುದ್ಧ ಯಕ್ಷಗಾನ ಕಲಾವಿದರು, ಸ್ಥಳೀಯ ಕಲಾವಿದರ ಜೊತೆಗೂಡಿ ಆಡಿತೋರಿಸಲಿದ್ದಾರೆ .

    ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ  ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು , ಮದ್ದಳೆಯಲ್ಲಿ ಶ್ರೀ ಸುನಿಲ್ ಭಂಡಾರಿ , ಚೆಂಡೆ ಶ್ರೀ ಸುಜನ್ ಹಾಲಾಡಿಯವರಿಂದ  ಮುಮ್ಮೇಳದಲ್ಲಿ ಶ್ರೀ ಪ್ರಸನ್ನ ಶೆಟ್ಟಿಗಾರ್ , ಶ್ರೀ ಕಾರ್ತಿಕ್ ಚಿಟ್ಟಾಣಿ , ಶ್ರೀ ಸುಧೀರ್ ಉಪ್ಪೂರ್ , ಶ್ರೀ ರವೀಂದ್ರ ದೇವಾಡಿಗ , ಶ್ರೀ ವಿನಯ ಬೇರೊಳ್ಳಿ ,ಶ್ರೀ ಸಂತೋಷ್ ಕುಲಾಲ್ ಹಾಗು ಸ್ಥಳೀಯ ಕಲಾವಿದರು  ಭಾಗವಹಿಸಲಿದ್ದಾರೆ .

    ಎರಡೂ ಯಕ್ಷಗಾನ ಕಾರ್ಯಕ್ರಮಗಳು ಉಚಿತ ಪ್ರವೇಶ ಹಾಗು ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು , ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕಾಗಿ ಕಾರ್ಯಕ್ರಮದ ಆಯೋಜಕರಾದ ವಿನಾಯಕ ಹೆಗಡೆ, ಪ್ರಶಾಂತ್ ಭಟ್ ಮತ್ತು ಗಣಪತಿ ಭಟ್ ಅವರು ವಿನಂತಿಸಿಕೊಂಡಿದ್ದು ಸರ್ವರಿಗೂ   ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು  ಕೋರಿರುತ್ತಾರೆ .

    Share Information
    Advertisement
    Click to comment

    You must be logged in to post a comment Login

    Leave a Reply