Connect with us

    LATEST NEWS

    ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಮಗು ಅದಲು ಬದಲು..!!!?

    ಮಂಗಳೂರು : ಮಂಗಳೂರಿನ ಪ್ರಸಿದ್ದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಶಿಶು ಅದಲು  ಬದಲು ಆಗಿದೆ ಎಂಬ ಆರೋಪ  ಕೇಳಿಬಂದಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

    ಈ ಬಗ್ಗೆ ಸಂತ್ರಸ್ಥೆಯ ಅಣ್ಣ ತುಳುನಾಡ ರಕ್ಷಣಾ ವೇದಿಕೆಯ ಗಮನಕ್ಕೆ ಈ ವಿಷಯ ತಂದಿದ್ದು ತುರವೇ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದ ನಿಯೋ್ಗ ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ನಿಯೋಗದ ಮನವಿ ಆಲಿಸಿದ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಸಂತ್ರಸ್ಥೆ ಅಣ್ಣ “ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಹೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ತಂಗಿಯು  9 ತಿಂಗಳ ಗರ್ಭಿಣಿಯಾಗಿದ್ದು ದಿನಾಂಕ 17-08-2024 ಶನಿವಾರ ರಾತ್ರಿ ಚೆಕ್‌ಅಪ್‌ ಮಾಡಿಸುವ ಸಲುವಾಗಿ ಬಂಟ್ವಾಳದ ಸರಕಾರಿ. ಆಸ್ಪತ್ರೆಗೆಂದು ಹೋದಾಗ ಅಲ್ಲಿನ ವೈದ್ಯರು ಚೆಕ್‌ಅಪ್‌ ಮಾಡಿ ಇಲ್ಲಿ ಮಹಿಳಾ ವೈದ್ಯರು ಇರದ ಕಾರಣ ತಾವು ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಗೆ ನನ್ನ ತಂಗಿಯನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಅವರ ಮಾತಿನಂತೆ ನಾನು ನನ್ನ ತಂಗಿಯನ್ನು 17-08-2024 ರಂದು ಶನಿವಾರ ತಡರಾತ್ರಿ ಮಂಗಳೂರಿನ ಸರಕಾರಿ ಲೇಡಿಗೋಷನ್‌ ಹೆರಿಗೆ ಆಸ್ಪತ್ರೆಗೆ ಸೇರಿಸಿರುತ್ತೇವೆ. ದಿನಾಂಕ 18-08-2024 ಆದಿತ್ಯವಾರ ಬೆಳೆಗ್ಗೆ 10.30 ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾಳೆ. ಈ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್‌ ಇದೆ ಎಂದು ತಿಳಿಸಿದರು. ಇವತ್ತಿಗೆ 3 ದಿನ ಕಳೆದರೂ ಮಗುವನ್ನು ನಮಗೆ ತೋರಿಸಿರುವುದಿಲ್ಲ. ನಿನ್ನೆ ಸಂಜೆ ಮಂಗಳವಾರ ಸಂಜೆ ಏಕಾಏಕಿ ಬಂದು ಮಗುವಿಗೆ ಒಂದು ಕಣ್ಣಿಲ್ಲ ಎಂದು ತಿಳಿಸಿರುತ್ತಾರೆ. ಇದರಿಂದ ನಮಗೆ ಆಘಾತವಾಗಿದ್ದು. ಈ ಬಗ್ಗೆ ವೈದ್ಯರು ಹಾಗೂ ಅವರ ಮೇಲಾಧಿಕಾರಿಗಳು ಸೂಕ್ತ ಕಾರಣ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಹಾಗೂ ನಾವು ಅವರಲ್ಲಿ ವೈದ್ಯಕೀಯ ರಿಪೋರ್ಟ್‌ಗಳನ್ನು ಕೇಳುವಾಗಲೂ ಕೊಡದಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿರುತ್ತದೆ. ನನ್ನ ತಂಗಿಯು ಮಗುವಿಗೆ ಎದೆ. ಹಾಲು ಉಣಿಸಲು 3 ದಿನ ಕಳೆದರೂ ಅವಕಾಶ ನಿರಾಕರಿಸಲಾಗಿದೆ. ನಾವು ಚಿಂತಾಕ್ರಾಂತರಾಗಿದ್ದು, ನನ್ನ ತಂಗಿಗೆ ಹಾಗೂ ಮಗುವಿಗೆ ಅನ್ಯಾಯವಾಗಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ನಮ್ಮ ಕುಟುಂಬಕ್ಕೆ ಹಿರಿಯ ಅಧಿಕಾರಿಗಳು ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

    ಈ  ದೂರಿನ ಬಗ್ಗೆ ಲೆಡಿಗೋಷನ್ ಆಸ್ಪತ್ರೆಯ ಅಧೀಕ್ಷಕರು ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ಎಲ್ಲಾ ದಾಖಲೆಗಳು ಇವೆ. ಅದಲ್ಲದೆ, ಹೆರಿಗೆ ರೂಂನಿಂದ ಉನ್ನತ ಚಿಕಿತ್ಸೆಗಾಗಿ ಎನ್‌ಐಸಿಯು ಗೆ ಶಿಫ್ಟ್ ಮಾಡುವ ವೇಳೆಯೂ ಸಿಸಿಟಿವಿ ಫೂಟೇಜ್ ದಾಖಲೆಯೂ ಆಸ್ಪತ್ರೆಯಲ್ಲಿ ಲಭ್ಯವಿದ್ದು, ನಾವು ನಮ್ಮ ವೃತ್ತಿ ಧರ್ಮಕ್ಕೆ ಅಪಚಾರ ಆಗದ ರೀತಿಯಲ್ಲಿ ನಾವು ಕೆಲಸ ಮಾಡಿದ್ದೇವೆ.  ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಜನಿಸಿದ ಮಗುವಿಗೆ ತೊಂದರೆ ಇಲ್ಲದಾಗ ತಾಯಿ ಜತೆ ಮಗುವಿನ ಫೋಟೋ ತೆಗೆಯುವ ವ್ಯವಸ್ಥೆಯೂ ಇದೆ. ತೊಂದರೆ ಇದ್ದು ಎನ್‌ಐಸಿಯುಗೆ ಶಿಫ್ಟ್ ಮಾಡುವಾಗ ಅಲ್ಲಿಯೂ ಮಗುವಿಗೆ ಹೆರಿಗೆ ವೇಳೆ ಹಾಕಲಾಗುವ ಟ್ಯಾಗ್, ಕೇಸ್ ಶೀಟ್ ಇಟ್ಟು ಫೋಟೋ ನಮ್ಮ ಸಿಸ್ಟಮ್‌ಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದಿದ್ದಾರೆ.,

    Share Information
    Advertisement
    Click to comment

    You must be logged in to post a comment Login

    Leave a Reply