Connect with us

    KARNATAKA

    ಬಟ್ಟೆಗಳ ಅಡಿಯಲ್ಲಿ ಮಲಗಿದ ಮಗು… ಕಿಡ್ನಾಪ್ ಎಂದು ಪೊಲೀಸರ ಜೊತೆ ಊರೆಲ್ಲಾ ಹುಡುಕಿದ ಪೋಷಕರು..!!

    ಬೆಂಗಳೂರು 12 : ಮನೆಯಲ್ಲೇ ನಿದ್ರೆ ಮಾಡುತ್ತಿದ್ದ ಮಗುವಿಗಾಗಿ ಪೋಷಕರು ಊರೆಲ್ಲಾ ಹುಡುಕಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆ.ಆರ್‌.ಪುರದ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಮಗಳಿಗಾಗಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್‌ ಬಂದಾಗ ಮಗು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.


    ನನ್ನ ಮಗು ಕಿಡ್ನ್ಯಾಪ್‌ ಆಗಿದೆ ಎಂದು ಕೆ.ಆರ್‌.ಪುರ ಪೊಲೀಸ್‌ ಠಾಣೆಗೆ ಮೀನಾ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹುಡುಕಾಟ ಆರಂಭಿಸಿದರು. ಪೊಲೀಸರ ಜೊತೆ ಮಗಳಿಗಾಗಿ ಪೋಷಕರು ಅಕ್ಕಪಕ್ಕದ ಏರಿಯಾಗಳಲ್ಲೆಲ್ಲಾ ಹುಡುಕಾಟ ನಡೆಸಿದ್ದರು.

    ಕೊನೆಗೆ ಮಗು ಸಿಗಲಿಲ್ಲ ಎಂಬ ಆತಂಕದಲ್ಲೇ ಪೋಷಕರು ಮನೆಗೆ ವಾಪಸ್‌ ಆಗಿದ್ದಾರೆ. ಈ ವೇಳೆ ಮನೆಯಲ್ಲೇ ಮಗು ನಿದ್ದೆ ಮಾಡುತ್ತಿರುವುದು ಅವರಿಗೆ ತಿಳಿದುಬಂದಿದೆ. ಮನೆಯಲ್ಲಿ ಗುಡ್ಡೆ ಹಾಕಿದ್ದ ಬಟ್ಟೆಗಳ ಅಡಿಯಲ್ಲಿ ತಮ್ಮ ಮಗಳು ಮಲಗಿರುವುದನ್ನು ಕಂಡು ಮೀನಾ ನಿಟ್ಟುಸಿರು ಬಿಟ್ಟಿದ್ದಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *