Connect with us

    KARNATAKA

    ಶಾಲೆಗೆ ಬಂದು ಮಕ್ಕಳೊಂದಿಗೆ ಆಟವಾಡಿದ ಮರಿಯಾನೆ

    ಚಾಮರಾಜನಗರ, ಸೆಪ್ಟೆಂಬರ್ 05: ತಾಯಿಯಿಂದ ತಪ್ಪಿಸಿಕೊಂಡ ಆನೆ ಮರಿಯೊಂದು ಶಾಲೆಗೆ ಬಂದು ಮಕ್ಕಳೊಂದಿಗೆ ಆಟ ಆಡಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪುರಾಣಿ ಪೋಡಿನ ವಸತಿ ಶಾಲೆಯಲ್ಲಿ ನಡೆದಿದೆ.

    ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಮರಿಯಾನೆ ಪುರಾಣಿ ಪೋಡಿನ ವಸತಿ ಶಾಲೆಗೆ ಬಂದಿದೆ. ಆನೆ ಕಂಡದ್ದೇ ತಡ, ಖುಷಿಗೊಂಡ ಮಕ್ಕಳು ಆನೆ ಮರಿಯೊಂದಿಗೆ ಆಡಿ ನಲಿದಾಡಿದ್ದಾರೆ.

    ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಯಳಂದೂರು ವಲಯದ ಸಿಬ್ಬಂದಿ ಬಂದು ಗಸ್ತು ತಿರುಗಿದ್ದಾರೆ. ಈ ವೇಳೆ ತಾಯಿ ಆನೆ ಘೀಳಿಡುತ್ತಿದ್ದುದನ್ನು ಗಮನಿಸಿ, ಈರಣ್ಣ ಕಟ್ಟೆ ಪೋಡಿನ ಬಳಿ ಮರಿಯಾನೆ ತಾಯಿಯನ್ನು ಸೇರುವಂತೆ ಮಾಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply