Connect with us

LATEST NEWS

ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವು….!!

ಮಂಗಳೂರು ಜುಲೈ 20 : ನೀರು ತುಂಬಿದ್ದ ಬಕೆಟ್ ಗೆ ಒಂದು ವರ್ಷ 8 ತಿಂಗಳ ಮಗು ಬಿದ್ದು ಸಾವನಪ್ಪಿದ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ. ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಝ್ ಅನ್ಸಾರಿ ಎಂಬವರ ಪುತ್ರಿ ಆಯಿಶ ಮೃತ ಮಗು.


ಜಾರ್ಖಂಡ್ ಮೂಲದವರಾದ ಫಿರೋಝ್ ಅನ್ಸಾರಿ ಕೂಲಿ ಕಾರ್ಮಿಕರಾಗಿದ್ದು, ಈ ದಂಪತಿಗಳು ಕಾವೂರು ಮಸೀದಿಯ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬುಧವಾರ ಸಂಜೆ ಮಗು ಆಯಿಶ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್ ಗೆ ಬಿದ್ದು, ಮೃತಪಟ್ಟಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *