KARNATAKA
ತಂದೆಯ ವಾಹನಕ್ಕೆ ಸಿಲುಕಿ ಸಾವನಪ್ಪಿದ ಒಂದೂವರೆ ವರ್ಷದ ಕಂದಮ್ಮ…!!

ಆನೆಕಲ್ ಜುಲೈ 22: ತಂದೆಯ ವಾಹನಕ್ಕೆ ಸಿಲುಕಿ ಒಂದೂವರೆ ವರ್ಷದ ಕಂದಮ್ಮ ಸಾವನಪ್ಪಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮನಹಳ್ಳಿಯಲ್ಲಿ ನಡೆದಿದೆ.
ಮೃತ ಕಂದಮ್ಮನನ್ನು ಬಾಲಕೃಷ್ಣ ಎಂಬುವರ ಮಗಳು ಮನಿಶಾ ದೇವಿ ಎಂದು ಗುರುತಿಸಲಾಗಿದೆ. ಇಚರ್ ವಾಹನ ಚಾಲಕರಾಗಿರುವ ಬಾಲಕೃಷ್ಣ ಅವರು ಮನೆ ಬಳಿ ವಾಹನ ರಿವರ್ಸ್ ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಮನಿಶಾ ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ. ಇನ್ನು ಸರ್ಜಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading