BELTHANGADI
ವಿದ್ಯುತ್ ಶಾಕ್ ಗೆ ತಾಯಿ ಮತ್ತು 4 ವರ್ಷದ ಮಗು ಬಲಿ

ಬೆಳ್ತಂಗಡಿ ಮೇ 30: ನೀರಿನ ಪಂಪ್ ನ ಸ್ವಿಚ್ ಹಾಕಲು ಹೋಗಿ ವಿದ್ಯುತ್ ಶಾಕ್ ಹೊಡೆದು ತಾಯಿ ಮತ್ತು ಮಗು ಸಾವನಪ್ಪಿರುವ ಘಟನೆ ಧರ್ಮಸ್ಥಳ ಸಮೀಪದ ಪಟ್ರಮೆ ಎಂಬಲ್ಲಿ ನಡೆದಿದೆ.
ಮೃತರನ್ನು ಪಟ್ರಮೆ ಗ್ರಾಮದ ಕೊಡಂದೂರು ನಿವಾಸಿ ಹರೀಶ್ ಗೌಡ ಅವರ ಪತ್ನಿ ಗೀತಾ(30) ಮತ್ತು ನಾಲ್ಕು ವರ್ಷದ ಅವರ ಮಗ ಭವಿಷ್ ಎಂದು ತಿಳಿದು ಬಂದಿದೆ.

ದನಗಳಿಗೆ ನೀರು ಕೊಡಲೆಂದು ಮೋಟಾರ್ ಹಾಕಲು ತೆರಳಿದ್ದುದಾಗಿ ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.