KARNATAKA
ಚಿಲಿ ದೇಶೀಯರ ಆಯುರ್ವೇದ ಪ್ರೇಮ -ಮಂಗಳೂರು ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ತರಬೇತಿ..!
ಮಂಗಳೂರು : ಚಿಲಿ ದಕ್ಷಿಣ ಅಮೇರಿಕಾದ ಒಂದು ಸುಂದರ ದೇಶ. ಈ ದೇಶದ ಜನರ ಆಯುರ್ವೇದ ಪ್ರೇಮ ಮೆಚ್ಚುವಂತದ್ದು. ಇಲ್ಲಿ ಸೋಮೋಸ್
ಇಂಡಿಯಾ ಹೆಸರಿನ ಆಯುರ್ವೇದ ಸಂಸ್ಥೆಯನ್ನು ನಡೆಸುತ್ತಿರುವ ಪ್ಯಾಬ್ಲೋ ಮತ್ತು ಕರೀನಾ ದಂಪತಿಗಳು ಭಾರತ ಮತ್ತು ಚಿಲಿ ದೇಶಗಳ ಮಧ್ಯದ ಸೇತುವೆಯಗಿದ್ದಾರೆ.
2015ರಿಂದ ಆಯುರ್ವೇದ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ 7 ವಿದ್ಯಾರ್ಥಿಗಳೊಂದಿಗೆ ನಮ್ಮ ಮಂಗಳೂರಿನ ಪ್ರಸಿದ್ದ ಈಝೀ ಆಯುರ್ವೇದ ಅಸ್ಪತ್ರೆಗೆ ಆಯುರ್ವೇದ ಕಲಿಕೆ ಮತ್ತು ಚಿಕಿತ್ಸೆಗಾಗಿ ಬಂದಿಳಿದಿದ್ದಾರೆ.
ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಇವರು ಪಂಚಕರ್ಮ ತರಬೇತಿ, ಯೋಗ, ವೈದ್ಯರೊಂದಿಗೆ ಒಳರೋಗಿ ವಿಭಾಗದ ರೌಂಡ್ಸ್, ಹೊರರೋಗಿಗಳ ತಪಾಸಣೆ, ಆಯುರ್ವೇದ ಶಸ್ತ್ರಚಿಕಿತ್ಸೆ, ಲೀಚ್ ಚಿಕಿತ್ಸೆ, ಅಗ್ನಿಕರ್ಮ, ಸೌಂದರ್ಯ ಚಿಕಿತ್ಸೆ, ಆಯುರ್ವೇದ ತರಗತಿ, ಔಷಧಿ ತಯಾರಿಕೆ, ಔಷಧ ಗಿಡಗಳ ಪರಿಚಯ, ಭಾರತೀಯ ಆಹಾರ ಪದ್ಧತಿಗಳ ಪರಿಚಯ ಮತ್ತು ತಯಾರಿ ಮುಂತಾದ ವಿಷಯಗಳನ್ನು ಕಲಿಯುತ್ತಿದ್ದಾರೆ.
ಈ ತಂಡಕ್ಕೆ ಡಾ| ಜನಾರ್ಧನ ವಿ. ಹೆಬ್ಬಾರ್, ಡಾ| ರವಿಗಣೇಶ್ ಮೊಗ್ರ, ಡಾ| ರಘುರಾಮ್ ಶಾಸ್ತ್ರಿ, ಡಾ| ಅಮೃತ ಟಿ.ಟಿ, ಡಾ| ಸುದರ್ಶನ್, ಡಾ| ಶಿಲ್ಪಾ ರಾಮದಾಸ್, ಡಾ| ಸಿಂಧು ಸ್ಮಿತ, ಡಾ| ಅಶ್ವಿನ್ ಶೆಟ್ಟಿ ಇವರು ತರಬೇತಿ ನೀಡುತ್ತಿದ್ದಾರೆ, ಅಲ್ಲದೆಯೇ ಹಲವು ವಿದ್ಯಾರ್ಥಿಗಳು ಶುದ್ಧ ಆಯುರ್ವೇದ ಚಿಕಿತ್ಸೆಯ ಲಾಭವನ್ನೂ ಪಡೆದಿದ್ದಾರೆ.
ಈಝೀ ಆಯುರ್ವೇದ ಆಸ್ಪತ್ರೆಯ ವತಿಯಿಂದ, ಸ್ಥಳೀಯ ಸಸ್ಯಗಳ ಪರಿಚಯಕ್ಕಾಗಿ ಮೂಡಬಿದ್ರೆಯ ಕೊಣಾಜೆ ಕಲ್ಲು, ಕಾರಿಂಜೇಶ್ವರ ಮುಂತಾದ ಸ್ಥಳಗಳಿಗೆ ಭೇಟಿ ಕೊಡಲಾಯಿತು.
ಈಝೀ ಆಯುರ್ವೇದ ಆಸ್ಪತ್ರೆಯಲ್ಲಿನ ತರಬೇತಿಯಿಂದ ಪ್ರೇರಿತರಾಗಿರುವ ಪ್ಯಾಬ್ಲೋ ಮತ್ತು ಕರೀನಾ ದಂಪತಿಗಳು ಮುಂದಿನ ಬಾರಿ ಇನ್ನಷ್ಟು ವಿದ್ಯಾರ್ಥಿಗಳೊಂದಿಗೆ ಬರುವುದಾಗಿ ತಿಳಿಸಿದ್ದಾರೆ.
ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಸೋರಿಯಾಸಿಸ್, ಎಗ್ಝಿಮಾ, ಡರ್ಮಟೈಟಿಸ್ ಮುಂತಾದ ಚರ್ಮದ ಕಾಯಿಲೆಗಳು, ಕೀಲು ನೋವು, ಮೊಣಕಾಲು ನೋವು, ಕುತ್ತಿಗೆ ನೋವು, ಸೊಂಟ ನೋವು, ಗಂಡಸು ಮತ್ತು ಹೆಂಗಸರ ಬಂಜೆತನ,ಸ್ತೀರೋಗ, ಮುಟ್ಟಿನ ಸಮಸ್ಯೆ,ಒತ್ತಡ, ಆತಂಕ, ನಿದ್ರಾಹೀನತೆ, ಖಿನ್ನತೆ, ಮಾನಸಿಕ ಅಸ್ವಸ್ಥತೆಗಳು,ಮೈಗ್ರೇನ್,ಪಾರ್ಶ್ವವಾಯು, ನರಸಂಬಂಧಿತ ತೊಂದರೆಗಳು,ಥೈರಾಯ್ಡ್,ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದಯದ ತೊಂದರೆಗಳು, ಬೊಜ್ಜು,ಗ್ಯಾಂಗ್ರೀನ್, ವಾಸಿಯಾಗದ ಗಾಯಗಳು, ಬಾವು,ಪೈಲ್ಸ್, ಫಿಸ್ತುಲಾ, ಸೈನಸ್,
ಅಸ್ತಮಾ, ಅಲರ್ಜಿ, ಕೆಮ್ಮು, ಶೀತ, ಬ್ರಾಂಕೈಟಿಸ್,ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ಮೂತ್ರನಾಳದ ಸೋಂಕು, ಮೂತ್ರಪಿಂಡದ ಕಲ್ಲುಗಳು, ಮೂತ್ರಪಿಂಡದ ಉರಿಯೂತ, ಇತ್ಯಾದಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಈಝೀ ಆಯುರ್ವೇದ ಆಸ್ಪತ್ರೆಯನ್ನು ಸಂಪರ್ಕಿಸಲು 8618898900 ಗೆ ಕರೆಮಾಡಿ.
ವಾಟ್ಸಾಪ್ ಸಂಖ್ಯೆ 8867385567