LATEST NEWS
ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಬ್ಯಾನರ್ ಹರಿದ ದುಷ್ಕರ್ಮಿಗಳ ತಕ್ಷಣ ಅರೆಸ್ಟ್ ಮಾಡಿ – ಬಜರಂಗದಳ

ಮಂಗಳೂರು ಜನವರಿ 07: ಸುಳ್ಯದ ಖಾಸಗಿ ಬಸ್ ನಿಲ್ದಾಣದ ಹತ್ತಿರ ಹಾಕಿರುವ ಬ್ಯಾನರ್ ಹರಿದು ಹಾಕಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮಕೈಗೂಳ್ಳಬೆಕೆಂದು ಬಜರಂಗದಳ ಆಗ್ರಹಿಸಿದ್ದಾರೆ.
ಸುಳ್ಯದ ಖಾಸಗಿ ಬಸ್ ನಿಲ್ದಾಣದ ಸಮೀಪ ಹಾಕಲಾಗಿದ್ದ ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ವಿಚಾರದ ಬ್ಯಾನರನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಈ ದುಷ್ಕೃತ್ಯವನ್ನು ಬಜರಂಗದಳ ಬಲವಾಗಿ ಖಂಡಿಸುತ್ತದೆ. ತಕ್ಷಣ ಬ್ಯಾನರ್ ಹರಿದು ಹಾಕಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮಕೈಗೂಳ್ಳಬೇಕೆಂದು ಬಜರಂಗದಳ ವಿಭಾಗ ಸಹಸಂಯೋಜಕ್ ಪುನೀತ್ ಅತ್ತಾವರ ಪ್ರಕಟಣೆಯಲ್ಲಿ ಆಗ್ರಹಿಸಿದರು
