LATEST NEWS
ಮಂಗಳೂರಿನಲ್ಲಿ ಆಟೋ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ – ಆಟೋಗಳಿಲ್ಲದೇ ಪ್ರಯಾಣಿಕರ ಪರದಾಟ
ಮಂಗಳೂರು ಫೆಬ್ರವರಿ 05: ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಸಂಘಗಗಳ ಒಕ್ಕೂಟದ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಆಟೋ ಸೇವೆಯನ್ನು ಬಂದ್ ಮಾಡಿ ಆರ್.ಟಿ.ಓ ಚಲೋ ಕಾರ್ಯಕ್ರಮವನ್ನು ನಗರದ ಆಟೋ ಚಾಲಕರು ಮತ್ತು ಮಾಲಕರು ಆಯೋಜಿಸಿದ್ದರು.
ಬಳಿಕ ನಗರದ ಜ್ಯೋತಿ ವೃತ್ತದಿಂದ ಮಿನಿ ವಿಧಾನ ಸೌಧದ ವರೆಗೆ ಜಾಥಾ ನಡೆಸಿ ಬಳಿಕ ಪ್ರತಿಭಟನಾ ಸಭೆ ಸೇರಿದ ಆಟೋ ಚಾಲಕರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿ ಇಟ್ಟಿದ್ದಾರೆ, ನಗರದಲ್ಲಿ ಬ್ಯಾಟರಿ ಚಾಲಿ ಅಟೋಗಳ ಹಾವಳಿ ವಿಪರೀತವಾಗಿದ್ದು ಅವುಗಳಿಂದ ಇತರ ಆಟೋಗಳಿಗೆ ಭಾರಿ ಸಮಸ್ಯೆಗಳು ಎದುರಾಗಿದೆ. ಇ ಆಟೋಗಳಿಗೆ ನಿಗದಿ ಮಾಡಿದ ವಲಯದ ಬಗ್ಗೆ ಸಮರ್ಪಕ ಮಾರ್ಗದರ್ಶನ ಇಲ್ಲ . 25-11-2022ರ ಬಳಿಕ ನೋಂದಣಿಯಾದಂತಹ ಬ್ಯಾಟರಿಜಾಲಿತ ಆಟೋರಿಕ್ಷಾಗಳಿಗೆ ವಲಯ-1ರ ಕ್ರಮಸಂಖ್ಯೆ ನೀಡಬಾರದು.
ವಲಯ- 1 ಕ್ರಮಸಂಖ್ಯೆ ಇಲ್ಲದ ಯಾವುದೇ ಕಂಪೆನಿಯ ಆಟೋರಿಕ್ಷಾಗಳು ಮಂಗಳೂರು ನಗರ ಪ್ರವೆಶಿಸಬಾರದು ನಗರದಲ್ಲಿ ಆಟೋರಿಕ್ಷಾ ನಿಲ್ದಾಣಗಳ ಕೊರತೆಯನ್ನು ಸರಿಪಡಿಸಬೇಕು. ಸಿ.ಎನ್.ಜಿ. ಅಥವಾ ಎಲ್.ಪಿ.ಜಿ. ಆಟೋರಿಕ್ಷಾಗಳಲ್ಲಿ ಮಂಗಳೂರು ನಗರದ ಪರವಾನಿಗೆ ಇಲ್ಲದೇ ನಕಲಿ ಆಟೋರಿಕ್ಷಾಗಳ ಹಾವಳಿ ಹೆಚ್ಚಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಆಟೋರಿಕ್ಷಾಗಳ ಪರವಾನಿಗೆಯನ್ನು ಬ್ಯಾಟರಿ ಚಾಲಿತ ಆಟೋರಿಕ್ಷಾಗಳಿಗೆ ವರ್ಗಾಯಿಸಲು ಅವಕಾಶ ನೀಡಬೇಕು ಹೀಗೇ ಪ್ರಮುಖ ಬೇಡಿಕೆಗಳನ್ನು ಆಟೋ ಚಾಲಕರು ಮುಂದಿಟ್ಟರು. ಬೆಳಿಗ್ಗೆ 10 ಗಂಟೆಯಿಂದ ಆಟೋಗಳನ್ನು ಬದಿಗಿಟ್ಟು ಪ್ರತಿಭಟನೆಯಲ್ಲಿ ಚಾಲಕರು ತೊಡಗಿದ್ದರಿಂದ ನಗರದಲ್ಲಿ ಆಟೋಗಳಿಲ್ಲದೆ ಪ್ರಯಾಣಿಕರು ಪರದಾಡಬೇಕಾಯಿತು.