LATEST NEWS
ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಆತ್ಮಹತ್ಯೆ ಕೇಸ್ – ನಕಲಿ ದಾಖಲೆ ಸೃಷ್ಠಿಸಿದ ಆರೋಪದ ಮೇಲೆ ಅತುಲ್ ರಾವ್‌ಗೆ 1 ವರ್ಷ ಜೈಲು
ಉಡುಪಿ ನವೆಂಬರ್ 11: ನಕಲಿ ದಾಖಲೆಗಳ ಸೃಷ್ಟಿಗಾಗಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ಟ ಪತ್ನಿ ಪದ್ಮಪ್ರಿಯರ ಆತ್ಮಹತ್ಯೆ ಪ್ರಕರಣದ ಆರೋಪಿ ಅತುಲ್ ರಾವ್‌ಗೆ ಉಡುಪಿ ಜಿಲ್ಲಾ ನ್ಯಾಯಾಲಯ 1 ವರ್ಷ ಜೈಲುಶಿಕ್ಷೆ ವಿಧಿಸಿದೆ.
2008ರಲ್ಲಿ ಜೂನ್ 10ರಂದು ಪದಪ್ರಿಯ ಅವರು ಮನೆಯಿಂದ ನಾಪತ್ತೆಯಾಗಿದ್ದು, ನಂತರ ದೆಹಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಅವರನ್ನು ಉಡುಪಿಯಿಂದ ದೆಹಲಿಗೆ ಕರೆದುಕೊಂಡು ಹೋಗಿದ್ದ ರಘುಪತಿ ಭಟ್ಟ ಅವರ ಬಾಲ್ಯದ ಗಳೆಯ ಅತುಲ್ ರಾವ್ ಅವರ ಮೇಲೆ ಅಪಹರಣ, ಆತ್ಮಹತ್ಯೆ ಪ್ರಚೋದನೆಯ ದೂರು ನೀಡಿದ್ದರು. ನಂತರದ ಚುನಾವಣೆಯಲ್ಲಿ ರಘುಪತಿ ಭಟ್ಟರಿಗೆ ಪಕ್ಷ ಟಿಕೇಟ್ ನೀಡದಿರುವಂತಹ ಬಾರೀ ಸಂಚಲನಕ್ಕೆ ಕಾರಣವಾಗಿದ್ದ ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸಲಾಗಿತ್ತು. ಆದರೆ ತನಿಖೆಯಲ್ಲಿ ಅಪಹರಣ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸಾಬೀತಾಗದೇ ಅತುಲ್ ಅವರ ಮೇಲಿನ ಆರೋಪವನ್ನು ಸಿಓಡಿ ಕೈಬಿಟ್ಟಿತ್ತು.
2009ರಲ್ಲಿ ಸಿಓಡಿ ಆರೋಪ ಪಟ್ಟಿಸಲ್ಲಿಸಿದ್ದು, ಅದರಲ್ಲಿ ಅತುಲ್ ರಾವ್ ಅವರು ತನ್ನ ಪತ್ನಿ ಮೀರಾ ಅವರ ಡ್ರೈವಿಂಗ್ ಲೈಸನ್ಸ್‌ನಲ್ಲಿ ಪದ್ದಪ್ರಿಯಾರ ಫೋಟೋ ಅಂಟಿಸಿ, ನಕಲಿ ದಾಖಲೆ ಸೃಷ್ಟಿಸಿದ್ದು, ಬೆಂಗಳೂರಿನ ನಿವಾಸಿ ಎಂದು ಸುಳ್ಳು ವಿಳಾಸ ನೀಡಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆದದ್ದು ಮತ್ತು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದು, ತನ್ನ ವಿದ್ಯಾರ್ಹತೆಯನ್ನು ಜಿಇ ಎಂದೂ, ಇಂಟೆಲ್ ಕಂಪೆನಿಯಲ್ಲಿ ಇಂಜಿನಿಯರ್ ಎಂದೂ ಸುಳ್ಳು ಹೇಳಿ ದೆಹಲಿಯಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿತ್ತು ಎಂದು ಆರೋಪಿಸಲಾಗಿತ್ತು, ಸುದೀರ್ಘ ಕಾಲ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ನ್ಯಾಯಾಲಯವು ಈ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಶುಕ್ರವಾರ ಅತುಲ್ ರಾವ್‌ಗೆ ಐಪಿಸಿ 418 ರಡಿ (ನಕಲಿ ದಾಖಲೆ ತಯಾರಿ) 1 ವರ್ಷ ಜೈಲು ಮತ್ತು 5000 ರೂಪಾಯಿ ಐಪಿಸಿ 417 (ಮೋಸ), ಐಪಿಸಿ 471 (ವಂಚನೆ)ಯಡಿ ತಲಾ 6 ತಿಂಗಳು ಜೈಲು ಮತ್ತು 5000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಜಿಲ್ಲಾ ನ್ಯಾಯಾಲಯದ ಸಿಜೆಎಂ ನ್ಯಾಯಾಧೀಶ ಯೋಗೇಶ್ ಈ ತೀರ್ಪು ನೀಡಿದ್ದು, ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು.