FILM
ಕ್ಯಾನ್ಸರ್ ಗೆ ಬಲಿಯಾದ ಬಾಲಿವುಡ್ ಕಾಮಿಡಿಯನ್ ಅತುಲ್ ಪರ್ಚುರೆ
ಮುಂಬೈ ಅಕ್ಟೋಬರ್ 15: ಬಾಲಿವುಡ್ ಕಾಮಿಡಿ ನಟ ಅತುಲ್ ಪರ್ಚುರೆ ಕ್ಯಾನ್ಸರ್ ನಿಂದಾಗಿ ಸಾವನಪ್ಪಿದ್ದಾರೆ. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅತುಲ್ ಪರ್ಚುರೆ ಲಿವರ್ ಕ್ಯಾನ್ಸರ್ ನಿಂದಾಗಿ ನಿಧನರಾಗಿದ್ದಾರೆ. ಅತುಲ್ ಪರ್ಚುರೆ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕೆಲವು ವರ್ಷಗಳಿಂದ ಅವರು ಲಿವರ್ ಕ್ಯಾನ್ಸರ್ಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ತಾಯಿ, ಪತ್ನಿ ಮತ್ತು ಮಗಳನ್ನು ಅತುಲ್ ಅವರು ಅಗಲಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಅತುಲ್ ಅವರು ಖ್ಯಾತಿ ಗಳಿಸಿದ್ದರು. ಅವರ ಜೊತೆ ಕೆಲಸ ಮಾಡಿದ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಅತುಲ್ ಪರ್ಚುರೆ ಅವರು ತಮ್ಮದೇ ಛಾಪು ಮೂಡಿಸಿದ್ದರು. ಅವರ ಪ್ರತಿಭೆಯಿಂದ ಬಾಲಿವುಡ್ ಸಿನಿಮಾಗಳಲ್ಲೂ ಅವಕಾಶ ಪಡೆದರು. ‘ಕಲ್ಯುಗ್’, ‘ಗೋಲ್ಮಾಲ್’, ‘ಪಾರ್ಟ್ನರ್’, ‘ಬಿಲ್ಲು ಬಾರ್ಬರ್’, ‘ಆಲ್ ದಿ ಬೆಸ್ಟ್’, ‘ಆವಾರಪನ್’, ‘ಬುಡ್ಡ ಹೋಗ ತೇರಾ ಬಾಪ್’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಅತುಲ್ ಪರ್ಚುರೆ ಅವರು ಅಭಿನಯಿಸಿದ್ದರು.