LATEST NEWS
ಶ್ರೀ ಕ್ಷೇತ್ರ ಪೊಳಲಿ ಬ್ರಹ್ಮಕಲಶದ ಸಂದರ್ಭ ಆಕರ್ಷಣೆಯಾಗಿದ್ದ ಅರ್ಕುಳದ ಬಸವ ಶಂಕರ ಇನ್ನಿಲ್ಲ

ಶ್ರೀ ಕ್ಷೇತ್ರ ಪೊಳಲಿ ಬ್ರಹ್ಮಕಲಶದ ಸಂದರ್ಭ ಆಕರ್ಷಣೆಯಾಗಿದ್ದ ಅರ್ಕುಳದ ಬಸವ ಶಂಕರ ಇನ್ನಿಲ್ಲ
ಮಂಗಳೂರು ಸೆಪ್ಟೆಂಬರ್ 16: ಶ್ರೀ ಕ್ಷೇತ್ರ ಪೊಳಲಿ ಬ್ರಹ್ಮಕಲಶದ ಸಂಭ್ರಮ ಸಂದರ್ಭದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದ ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರoತಾಯಿ ಕ್ಷೇತ್ರದ ಬಸವ ಶಂಕರ (16ವರ್ಷ) ಅಲ್ಪಕಾಲದ ಅಸೌಖ್ಯದ ನಂತರ ಇಂದು ಇಹಲೋಕ ತ್ಯಜಿಸಿತು.
ಕಾಂಕ್ರಿಜ್ ತಳಿಯ ಬಹು ಕಟ್ಟುಮಸ್ತಾಗಿದ್ದ ಶಂಕರನ ಗಂಭೀರ ನಡಿಗೆ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಶಂಕರನಿಗೆ 16 ವರ್ಷ ವಯಸ್ಸಾಗಿತ್ತು. ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರoತಾಯಿ ಕ್ಷೇತ್ರದಲ್ಲಿದ್ದ ಈ ಬಸವ ಶಂಕರನ ಆರೋಗ್ಯದಲ್ಲಿ ಕಳೆದ ಕೆಲ ದಿನಗಳಿಂದ ಏರುಪೇರಾಗಿತ್ತು. ಇತ್ತೀಚೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಸನ್ನಿಧಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪೊಳಲಿಯಲ್ಲಿದ್ದ ಶಂಕರ ಜನಾಕರ್ಷಣೆಯ ಕೇಂದ್ರಬಿಂದುವಾಗಿತ್ತು. ಕ್ಷೇತ್ರಕ್ಕೆ ಬರುವ ಪ್ರತಿ ಭಕ್ತನನ್ನು ತನ್ನ ಕಡೆ ಆಕರ್ಷಿಸುತಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಶ್ರೀ ಕ್ಷೇತ್ರ ಅರ್ಕುಳದ ಎಲ್ಲಾ ನೇಮ ಉತ್ಸವಗಳಲ್ಲಿ ಭಾಗವಹಿಸಿ, ದೇವತಾ ಕಾರ್ಯಗಳಲ್ಲಿ ಪಾಲ್ಗೊಂಡು ಎಲ್ಲರ ಪ್ರೀತಿ ಪಾತ್ರವಾಗಿದ್ದ ಈ ಶಂಕರ. ಕಾಂಕ್ರಿಜ್ ತಳಿಯ ಬಹು ಕಟ್ಟುಮಸ್ತಾಗಿದ್ದ ಶಂಕರನ ಗಂಭೀರ ನಡಿಗೆ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಜನರ ಶ್ರದ್ಧೆ, ಭಕ್ತಿಗಳ ಪ್ರತೀಕವಾಗಿ ಪೂಜೆಗೊಳ್ಳುತ್ತಿದ್ದ ಸಾಧು ಸ್ವಭಾವದ ಶಂಕರನಿಗೆ ನೂರಾರು ಭಕ್ತರು ಅಂತಿಮ ನಮನ ಸಲ್ಲಿಸಿದರು.