LATEST NEWS
ಮೀನು ವ್ಯಾಪಾರಿಯ ಕೊಲೆಯತ್ನ ಪ್ರಕರಣ: ರೌಡಿಶೀಟರ್ ಕೋಡಿಕೆರೆ ಲೋಕೇಶ್ ಅರೆಸ್ಟ್

ಮಂಗಳೂರು ಮೇ 06: ಸುಹಾಸ್ ಶೆಟ್ಟಿ ಕೊಲೆಗೆ ಪ್ರತಿಯಾಗಿ ಕೊಂಚಾಡಿಯಲ್ಲಿ ಮೀನು ವ್ಯಾಪಾರಿಗೆ ಚೂರಿ ಇರಿತಕ್ಕೆ ಯತ್ನಿಸಿದ ಪ್ರಕರಣ ಸಂಬಂಧಿಸಿದಂತೆ ರೌಡಿ ಶೀಟರ್ ಲೋಕಿ ಯಾನೆ ಲೋಕೇಶ್ ಕೋಡಿಕೆರೆ ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಘೋಷಣೆ ಸಂದರ್ಭದಲ್ಲಿ ಬೆಳ್ಳಂಬೆಳಗ್ಗೆ ಮೀನು ವ್ಯಾಪಾರಿ ಮೊಹಮ್ಮದ್ ಲುಕ್ಕಾನ್ ಎಂಬ ಯುವಕನಿಗೆ ಹಲ್ಲೆಗೈದು ಕಲ್ಲು ಎತ್ತಿ ಹಾಕಿ ಕೊಲ್ಲುವ ಯತ್ನ ನಡೆದಿತ್ತು.
ಈ ವೇಳೆ ಮಹಿಳೆಯೊಬ್ಬರು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ಪರಾರಿಯಾ ಗಿದ್ದರು. ಇದರಿಂದ ಲುಕ್ಮಾನ್ ಅಪಾಯದಿಂದ ಪಾರಾಗಿದ್ದರು. ಇದೀಗ ರೌಡಿಶೀಟರ್ ಕೋಡಿಕೆರೆ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
