Connect with us

    DAKSHINA KANNADA

    ಉಪ್ಪಿನಂಗಡಿ : ಅಡಿಕೆ ವ್ಯಾಪಾರಿ ಮೇಲೆ ಹಲ್ಲೆ ಪ್ರಕರಣ ಮೂವರು ಆರೋಪಿಗಳು ಆರೆಸ್ಟ್

    ಉಪ್ಪಿನಂಗಡಿ, ನವೆಂಬರ್ 9: ಅಡಿಕೆ ವರ್ತಕರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ನಗದು ಮತ್ತು ಚಿನ್ನದ ಸರ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.


    ಬಂಧಿತರನ್ನು ಬಂಟ್ವಾಳ ತಾಲೂಕು ಸಜಿಪಪಡು ಗ್ರಾಮದ ನಿವಾಸಿ ಅಪ್ರೀದ್, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಾಗಡಿಕಟ್ಟೆ ಮನೆ ದೊಡ್ಡಹನಕೊಡು ಗ್ರಾಮದ ನಿವಾಸಿ ಜುರೈಝ್ (20 ) ಹಾಗೂ ಬಂಟ್ವಾಳ ತಾಲೂಕು ಕಡೆಶಿವಾಲಯ ಗ್ರಾಮ ದೊಡ್ಡಾಜೆ ಮನೆಯ ಮೊಹಮ್ಮದ್ ತಂಝಿಲ್ (22) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ವಾಹನ, ಕೃತ್ಯಕ್ಕೆ ಬಳಸಿದ ಚೂರಿ ಹಾಗೂ ಮೂರು ಮೊಬೈಲ್ ಫೋನುಗಳು ಹಾಗೂ ದರೋಡೆಗೈದ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಪೆರ್ನೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ದೀಪಕ್ ಶೆಟ್ಟಿ ಎಂಬವರು ಅಕ್ಟೋಬರ್ 27 ರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಅಡಿಕೆ ಮಾರಾಟದಿಂದ ಸಿಕ್ಕಿದ 3.50 ಲಕ್ಷ ರೂ.ಗಳೊಂದಿಗೆ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಘಟನೆ ನಡೆದಿದೆ.ದೀಪಕ್, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮ ಪಜೆಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಅಪರಿಚಿತರ ತಂಡ ದ್ವಿಚಕ್ರ ವಾಹನದಲ್ಲಿ ಬಂದು ದೀಪಕ್ ಅವರನ್ನು ತಡೆದು ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾರೆ.ಅವರ ಬಳಿ ಇದ್ದ ನಗದು ಮತ್ತು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿದ್ದರು ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಯಾಳು ದೀಪಕ್ ಶೆಟ್ಟಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    Share Information
    Advertisement
    Click to comment

    Leave a Reply

    Your email address will not be published. Required fields are marked *