LATEST NEWS
ಮುಲ್ಕಿ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ದಾಳಿ: ಸ್ಥಳದಲ್ಲಿ ಬಿಗುವಿನ ವಾತಾವರಣ

ಮಂಗಳೂರು: ಮಂಗಳೂರಿನಲ್ಲಿ ಚುನಾವಣೋತ್ತರ ಸಂಘರ್ಷ ನಡೆದಿದೆ. ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ನಗರದ ಮೂಡುಶೆಡ್ಡೆಯ ಬಳಿ ಕಲ್ಲು ತೂರಾಟ ನಡೆಸಲಾಗಿದೆ.
ಸಂಜೆ ವೇಳೆ ಮಿಥುನ್ ರೈ ನಗರದ ಮೂಡುಶೆಡ್ಡೆ ಬಳಿ ತಲುಪಿದಾಗ ಬಿಜೆಪಿ ಪಕ್ಷದ ಪರ ಘೋಷಣೆ ಕೇಳಿ ಬಂದಿದೆ.

ಈ ವೇಳೆ ಮಿಥುನ್ ರೈ ಜೊತೆಗಿದ್ದವರೂ ಸಹ ಘೋಷಣೆ ಕೂಗಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ತಕ್ಷಣವೇ ಎರಡೂ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದು, ಕಲ್ಲು ತೂರಾಟ ನಡೆದಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಕೆ.ಎಸ್.ಆರ್‌ಪಿ, ಸಿಆರ್‌ಪಿಎಫ್ ತುಕಡಿ ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.