LATEST NEWS
ಸುದ್ದಿ ವಾಹಿನಿಯ ಚರ್ಚೆ ವೇಳೆ ಐಐಟಿ ಬಾಬಾ ಮೇಲೆ ಹಲ್ಲೆ?

ನೋಯ್ತಾ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಹಾಕುಂಭದ ಸಂದರ್ಭದಲ್ಲಿ ಜನಪ್ರಿಯತೆ ಗಳಿಸಿದ ‘ಐಐಟಿ ಬಾಬಾ’ ಅಲಿಯಾಸ್ ಅಭಯ್ ಸಿಂಗ್, ನೋಯ್ಯಾದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯ ವೇಳೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಐಐಟಿ ಬಾಬಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಖಾಸಗಿ ವಾಹಿನಿಯ ಚರ್ಚೆ ವೇಳೆ ಕೇಸರಿ ಶಾಲು ಧರಿಸಿದ್ದ ಗುಂಪೊಂದು ಸುದ್ದಿ ಮನೆಯೊಳಗೆ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ ಬಳಿಕ ಕೋಲಿನಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಮೇಲಿನ ಹಲ್ಲೆಯನ್ನು ಖಂಡಿಸಿ ‘ಐಐಟಿ ಬಾಬಾ’ ಸೆಕ್ಟರ್ 126 ರಲ್ಲಿ ಪೊಲೀಸ್ ಔಟ್‌ಪೋಸ್ಟ್ ಹೊರಗೆ ಪ್ರತಿಭಟನೆ ನಡೆಸಿದ್ದು ಇದಾದ ಬಳಿಕ ಪೊಲೀಸರ ಮನವೊಲಿಕೆ ನಂತರ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

डिबेट के दौरान IIT बाबा के साथ मारपीट का आरोप. नोएडा स्थित निजी न्यूज़ चैनल में डिबेट के लिए आए थे IIT बाबा. मारपीट का आरोप लगाकर बाबा पुलिस चौकी के सामने बैठे. पुलिस कर्मियों ने किसी तरह IIT बाबा को समझा बुझा के वापस भेजा. थाना सेक्टर 126 इलाके का मामला.
VIDEO CREDIT: Abhey… pic.twitter.com/4btnGxstk0
— NDTV India (@ndtvindia) February 28, 2025
ಇನ್ನು ಈ ಘಟನೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು ಅದರಂತೆ ‘ಶುಕ್ರವಾರ ನೋಯ್ಯಾದಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ‘ಚರ್ಚೆ’ ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಐಐಟಿ ಬಾಬಾ ಆರೋಪಿಸಿದ್ದಾರೆ ವೈರಲ್ ಆಗಿರುವ ವೀಡಿಯೊದಲ್ಲಿ, ಬಾಬಾ ಚರ್ಚೆಗೆ ಹೋಗುವಾಗ ಹಲ್ಲೆ ಮತ್ತು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು ಯಾವುದೇ ಹಲ್ಲೆ ಘಟನೆ ಬೆಳಕಿಗೆ ಬಂದಿಲ್ಲ ಎಲ್ಲ ಸಂಗತಿಗಳನ್ನು ತನಿಖೆ ನಡೆಸಲಾಗುತ್ತಿದೆ. ತನಿಖೆಯ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ
ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತೆ ಎಂದಿದ್ದ ಐಐಟಿ ಬಾಬಾ: ಇತ್ತೀಚಿಗೆ ದುಬೈ ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ‘ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೋಲುತ್ತದೆ ಎಂದು ಭವಿಷ್ಯ ಹೇಳಿದ್ದರು ಆದರೆ ಐಐಟಿ ಬಾಬಾ ಭವಿಷ್ಯ ಮಾತ್ರ ಪಂದ್ಯಾವಳಿಯಲ್ಲಿ ಉಲ್ಟಾ ಆಗಿತ್ತು.