KARNATAKA
ಮನೆ ಎದುರು ಬೈಕ್ ನಿಲ್ಲಿಸಿದ ವಿಚಾರಕ್ಕೆ ಗಲಾಟೆ – ಮಚ್ಚಿನಿಂದ ಹಲ್ಲೆ ಸಿಸಿಟಿವಿ ವಿಡಿಯೋ

ವಿಜಯಪುರ: ಮನೆ ಎದುರು ನಿಲ್ಲಿಸಿದ ಬೈಕ್ ತೆಗೆಯುವ ವಿಚಾರಕ್ಕೆ ಮಚ್ಚಿನಲ್ಲಿ ಹೊಡೆದಾಡಿರುವ ಘಟನೆ ವಿಜಯಪುರ ನಗರದ ಟಕ್ಕೆಯಲ್ಲಿ ನಡೆದಿದೆ. ಎರಡು ಕುಟುಂಬಗಳ ಮಧ್ಯೆ ವಾಗ್ವಾದ ನಡೆದು ಬಳಿಕ ಮಾರಾಮಾರಿ ನಡೆದಿರೋ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದ ಕಿರಣ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಅವರಿಂದ ಮಚ್ಚು ಹಾಗೂ ಕೊಡಲಿಯಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಜೊತೆಗೆ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆಯಾಗಿದ್ದು, ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.