DAKSHINA KANNADA
‘ಸಿದ್ದರಾಮಯ್ಯ ಸರ್ಕಾರದಲ್ಲಿ ಭಯದ ವಾತಾವರಣ, ಬಿಜೆಪಿ, ಹಿಂದುತ್ವದ ಕಾರ್ಯಕರ್ತರೇ ಟಾರ್ಗೆಟ್’ ; ಸಿ ಟಿ ರವಿ ಆರೋಪ..!
ಮಂಗಳೂರು : ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಕೊಲೆ, ಸುಲಿಗೆ, ಭಯ ಇಲ್ಲದ ಕ್ರಿಮಿನಲ್ ಹಾಗೂ ಕಮ್ಯುನಲ್ ನಡುವಳಿಕೆ ಹೆಚ್ಚಾಗಿದ್ದು ಹತ್ಯೆ ಮತ್ತು ಆತ್ಮಹತ್ಯೆ ಯಲ್ಲಿ ನಂಬರ್ ವನ್ ಆಗಿದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ C T Ravi) ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಟಿ ರವಿ ಅವರು ಚುನಾವಣೆ ಬಳಿಕ ಬಿಜೆಪಿ ಹಾಗೂ ಹಿಂದುತ್ವದ ಕಾರ್ಯಕರ್ತರು ಟಾರ್ಗೆಟ್ ಆಗ್ತಿದ್ದು ಸರ್ಕಾರದ ಕಮ್ಯುನಲ್ ನೀತಿ, ಮತಾಂಧರಿಗೆ ಬೆಂಬಲ ನೀಡಲಾಗ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಚುನಾವಣೆ ಆದ ತಕ್ಷಣ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರ ಕಾರುಗಳಿಗೆ ಬೆಂಕಿ ಹಾಕಲಾಯ್ತು. ಬೆಳಗಾವಿಯಲ್ಲಿ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಯ್ತು.ಐಸಿಸ್ ಸೇರಿದವರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂಬ ವರದಿ ಬಂದಿದೆ. ಐವತ್ತಕ್ಕೂ ಹೆಚ್ಚು ಸ್ಲೀಪರ್ ಸೆಲ್ ಗಳು ರಾಜ್ಯದಲ್ಲಿ ಸಕ್ರಿಯವಾಗಿದೆ ಎಂದು ಆರೋಪಿಸಿದರು. ಸ್ಪೀಕರ್ ಖಾದರ್ ರವರು ಹೊರಗಿನವರು ಅಂತ ಹೇಳಬೇಕಾಗಿದ್ದು ಐಸಿಸ್ ಜೊತೆ ನಂಟಿರೋರನ್ನ,ಪಾಕಿಸ್ತಾನ ಹಾಗೂ ಕ್ರಿಮಿನಲ್ ಚಟುವಟಿಕೆಗಳ ಜೊತೆ ನಂಟು ಇರೋರನ್ನ ಎಂದ ಅವರು ಈ ಸರ್ಕಾರ ಮತಬ್ಯಾಂಕ್ ಗಾಗಿ ಮತಾಂಧರನ್ನ ಬೆಂಬಲಿಸ್ತಿದ್ದು ಇದು ಇಡೀ ದೇಶಕ್ಕೆ ಬಹಳ ಅಪಾಯಕಾರಿಯಾಗಿದೆ.ಸನಾತನ ಧರ್ಮ ಹಾಗೂ ಹಿಂದುತ್ವವನ್ನ ಮುಗಿಸೋ ಸಂಚು ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಓಟ್ ಜಿಹಾದ್ ಭಾರತದಲ್ಲಿ ಸಂವಿಧಾನವನ್ನೇ ಮುಗಿಸೋ ಸಂಚು ನಡೆಸ್ತಿದೆ. ಸರ್ಕಾರ ರಸ್ತೆ ಮಧ್ಯೆ ನಮಾಜ್ ಮಾಡಿದವರ ಕೇಸ್ ವಾಪಾಸ್ ಪಡೀತು. ಆದರೆ ಪ್ರಶ್ನೆ ಮಾಡಿದ ಶರಣ್ ಪಂಪ್ ವೆಲ್ ಮೇಲೆ ಕೇಸ್ ಹಾಕಿತು.ಈ ಮೂಲಕ ಮತಾಂಧರ ಬೆಂಬಲಿಸಿ ಪೊಲೀಸರಿಗೂ ಒಂದು ಸಂದೇಶ ಕೊಟ್ರಿ.ವಿಜಯೋತ್ಸವ ಮೆರವಣಿಗೆಯಲ್ಲಿ ಭಾರತ್ ಮಾತಕೀ ಜೈ ಅನ್ನೋದು ಅಪರಾಧವಾ?.. ಈ ಕಾರಣಕ್ಕೆ ಮತಾಂಧರು ಥಳಿಸಿ ಚೂರಿಯಿಂದ ಇರಿದಿದ್ದಾರೆ. ಆದರೆ ಮರುದಿನ ಕೆಲವರು ಬೇರೆ ದೂರು ಪೊಲೀಸರಿಗೆ ಕೊಟ್ಟಿದ್ದಾರೆ. ಪಾಕಿಸ್ತಾನದ ಕುನ್ನಿಗಳೇ ಅಂತ ಘೋಷಣೆ ಕೂಗಿದ್ದಾರೆ ಅಂತ ದೂರು ಕೊಟ್ಟಿದ್ದಾರೆ. ಪಾಕಿಸ್ತಾನದ ಕುನ್ನಿಗಳೇ ಅಂತ ಕೂಗಿದ್ರೆ ಆ ಪಾಕಿಸ್ತಾನದ ಕುನ್ನಿಗಳು ಪ್ರಚೋದನೆಗೆ ಒಳಗಾಗಬೇಕು. ಇದನ್ನು ನೋಡಿದ್ರೆ ಖಾದರ್ ಸಾಮ್ರಾಜ್ಯದಲ್ಲಿ ಪಾಕಿಸ್ತಾನದ ಕುನ್ನಿಗಳು ಇದಾರೆ ಅನ್ನೋದು ಸ್ಪಷ್ಟವಾಗುತ್ತದೆ. ಹೀಗಾಗಿ ಮಂಗಳೂರು ಕಮಿಷನರ್ ಮೊದಲು ಪಾಕಿಸ್ತಾನದ ಕುನ್ನಿಗಳನ್ನ ಗುರುತಿಸಬೇಕು. ಅವರ ಮೇಲೆ ಕೇಸು ಹಾಕಿ ಅವರನ್ನ ಗಡೀಪಾರು ಮಾಡಬೇಕು. ಖಾದರ್ ಅವರೇ ಗುರುತಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಿ ಎಂದ ಸಿಟಿ ರವಿ ಪಾಕಿಸ್ತಾನಕ್ಕೆ ಹುಟ್ಟಿದವರಿಗೆ ಮಾತ್ರ ಭಾರತ್ ಮಾತಕೀಜೈ ಅನ್ನೋದು ಪ್ರಚೋದನೆ ಆಗುತ್ತೆ.ಪಾಕಿಸ್ತಾನಕ್ಕೆ ಬೈದಾಗ ನಮಕ್ ಹರಾಂಗಳಿಗೆ ಮಾತ್ರ ಪ್ರಚೋದನೆ ಆಗೋದು. ಕಮಿಷನರ್ ಅನುಪಮ್ ಅಗರ್ವಾಲ್ ಮಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದು ನೀವು ಯಾಕೆ ಪಾಕಿಸ್ತಾನದ ಕಮಿಷನರ್ ಥರ ವರ್ತಿಸಿದ್ದೀರಿ . ನೀವು ಪಾಕಿಸ್ತಾನದ ಅಧಿಕಾರಿ ಅಲ್ಲ, ಇಂಡಿಯನ್ ಪೊಲೀಸ್ ಅಫೀಸರ್. ಕಮಿಷನರ್ ಹೇಳಿಕೆ ಸಮರ್ಥನೀಯವಲ್ಲ, ಅದನ್ನ ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು. ಪಾಕಿಸ್ತಾನದ ಕುನ್ನಿಗಳೇ ಅನ್ನೋದು ಪ್ರಚೋದನೆ ಅಂತ ಹೇಳ್ತೀರಲ್ವ? ಅವರು ಕೊಟ್ಟ ದೂರಿಗೆ ತಕ್ಷಣ ಬಿ ರಿಪೋರ್ಟ್ ಹಾಕಬೇಕು. ಮಾನ್ಯ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತೀಯ ಶಕ್ತಿಗಳ ಕೈಗೊಂಬೆ ಅಲ್ಲ ಅನ್ನೋದನ್ನ ನಿರೂಪಿಸಿ ಎಂದ ಸಿಟಿ ರವಿ ಸಿಸಿಟಿವಿ ದೃಶ್ಯಗಳ ಮೂಲಕ ಸತ್ಯ ಏನು ಅನ್ನೋದನ್ನ ನಿರೂಪಿಸಿ.ಇಲ್ಲದೇ ಇದ್ರೆ ಈ ಕಮ್ಯುನಲ್ ಗಳು ಬಿಜೆಪಿ ನಂತರ ಪೊಲೀಸರನ್ನೂ ಟಾರ್ಗೆಟ್ ಮಾಡ್ತಾರೆ ಎಂದು ಎಚ್ಚರಿಸಿದರುರಾಜ ಧರ್ಮ ಮಾತನಾಡೋ ಸ್ಪೀಕರ್ ಹಾಗೂ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಬಂದರೂ ಗಾಯಾಳುಗಳನ್ನ ಭೇಟಿಯಾಗಿಲ್ಲ. ಗಾಯಾಳುಗಳು ಪಾಕಿಸ್ತಾನದ ಕುನ್ನಿಗಳಾಗಿದ್ರೆ ಅವರು ಆಸ್ಪತ್ರೆಯಲ್ಲೇ ಇರ್ತಿದ್ದರು. ಆದರೆ ಗಾಯಾಳುಗಳು ಭಾರತಮಾತೆಯ ಸುಪುತ್ರರಾದ ಕಾರಣ ಇವರು ಆಸ್ಪತ್ರೆಗೆ ಬಂದಿಲ್ಲ ವೆಂದು ಹರಿಹಾಯ್ದ ಸಿಟಿ ರವಿ ಇರಿತಕ್ಕೆ ಒಳಗಾದ ಹರೀಶ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.