Connect with us

LATEST NEWS

ಹನಿಮೂನ್ ಮರ್ಡರ್ – ಕೊಲೆ ಆರೋಪಿಗೆ ವಿಮಾನ ನಿಲ್ದಾಣದಲ್ಲಿ ಕೆನ್ನೆಗೆ ಭಾರಿಸಿದ ಪ್ರಯಾಣಿಕ

ಇಂಧೋರ್ ಜೂನ್ 11: ಹನಿಮೂನ್ ಗೆ ಕರೆದೊಯ್ದು ಗಂಡನನ್ನು ಮುಗಿಸಿದ ಸೋನಮ್ ಮೇಲೆ ವಿಮಾನ ನಿಲ್ದಾಣದ ಪ್ರಯಾಣಿಕನೊಬ್ಬ ಕಪಾಳಮೋಕ್ಷ ಮಾಡಿದ ಘಟನೆ ಅಹಲ್ಯಾದೇವಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.


ನಾಲ್ಕು ಮಂದಿ ಆರೋಪಿಗಳ ಜೊತೆಗೆ ಮೇಘಾಲಯ ಪೊಲೀಸ್ ತಂಡ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ವಿಮಾನ ಪ್ರಯಾಣಿಕ ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಲಗೇಜ್‍ನೊಂದಿಗೆ ಕಾಯತ್ತಿದ್ದ ಪ್ರಯಾಣಿಕ, ಆರೋಪಿಗಳು ನಡೆದು ಬರುತ್ತಿದ್ದುದನ್ನು ಕಂಡ ಕೂಡಲೇ ಒಬ್ಬ ಆರೋಪಿಯನ್ನು ಹೊಡೆದು, ರಾಷ್ಟ್ರದ ಗಮನ ಸೆಳೆದ ಹತ್ಯೆ ಪ್ರಕರಣದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದ ಎಂದು ತಿಳಿದುಬಂದಿದೆ.

ಆರೋಪಿಗಳಿಗೆ ಮಾಸ್ಕ್ ತೊಡಿಸಿದ್ದರಿಂದ ಅರೋಪಿಗಳ ಪೈಕಿ ಹೊಡೆತ ತಿಂದವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *