Connect with us

LATEST NEWS

ಇಸ್ರೇಲ್ ನಲ್ಲಿ 40 ಶಿಶುಗಳ ಶಿರಚ್ಚೇದ ಮಾಡಿ ಅಟ್ಟಹಾಸ ಮೆರೆದ ಹಮಾಸ್ ಉಗ್ರರು

ಇಸ್ರೇಲ್ ಅಕ್ಟೋಬರ್ 11: ಹಮಾಸ್ ಉಗ್ರರು ಇಸ್ರೇಲ್ ನಲ್ಲಿ ಅಕ್ಷಶರಸಹ ನರಮೇಧವನ್ನೇ ಮಾಡಿದ್ದಾರೆ. ಹಮಾಸ್ ಉಗ್ರರ ದಾಳಿಗೆ ತತ್ತರಿಸಿರುವ ಇಸ್ರೇಲ್ ನಲ್ಲಿ ಇದುವರೆಗೆ 900ಕ್ಕೂ ಅಧಿಕ ಮಂದಿ ಸಾವಾಗಿದೆ. ಈ ನಡುವೆ ಹಮಾಸ್ ಉಗ್ರರ ಅಟ್ಟಹಾಸದ ವರದಿಗಳು ಬರಲಾರಂಭಿಸಿದ್ದು, ಕನಿಷ್ಠ 40 ಸಣ್ಣ ಮಕ್ಕಳ ಶಿರಚ್ಚೇದನವನ್ನು ಹಮಾಸ್ ಭಯೋತ್ಪಾದಕರು ಮಾಡಿದ್ದಾರೆ.


ಸುಮಾರು 70 ಹಮಾಸ್ ಭಯೋತ್ಪಾದಕರು ಬಂದೂಕುಗಳು, ಗ್ರೆನೇಡ್‌ಗಳು ಮತ್ತು ಚಾಕುಗಳೊಂದಿಗೆ ಕ್ಫರ್ ಅಜಾದಲ್ಲಿ ದುಷ್ಕೃತ್ಯಗಳನ್ನು ನಡೆಸಿದ್ದಾರೆ ಎಂದು i24 ನ್ಯೂಸ್ ಹೇಳಿದೆ. ಹಮಾಸ್ ಉಗ್ರರು ಪುರುಷರು, ಮಹಿಳೆಯರು, ಮಕ್ಕಳು, ಕೈಗಳನ್ನು ಕಟ್ಟಿಹಾಕಿ ಗುಂಡು ಹಾರಿಸಿದ್ದಾರೆ. ಅಲ್ಲದೆ ಕೆಲವರನ್ನು ನೇಣು ಬಿಗಿದು ಕೊಲ್ಲಲಾಗಿದ್ದು, ಕೆಲವರ ತಲೆಗಳನ್ನು ಕತ್ತರಿಸಲಾಗಿದೆ ಎಂದು ವರದಿಯಾಗಿದೆ.


ಇಸ್ರೇಲ್ನ IDF ನ ಡೆಪ್ತ್ ಕಮಾಂಡ್ ಮುಖ್ಯಸ್ಥರೊಬ್ಬರು ವರದಿಗಾರರಿಗೆ ನೀಡಿದ ಮಾಹಿತಿ ಪ್ರಕಾರ ಹಮಾಸ್ ಉಗ್ರರು ಯುದ್ದ ಮಾಡಿಲ್ಲ ಬದಲಿಗೆ ಹತ್ಯಾಕಾಂಡವನ್ನೇ ಮಾಡಿದ್ದಾರೆ. ಸಣ್ಣ ಮಕ್ಕಳು, ಮಹಿಳೆಯರು , ವಯಸ್ಸಾದ ವೃದ್ದರನ್ನು ಅವರು ಮಲಗುವ ಕೊಣೆಯಲ್ಲೇ ಕೊಂದಿದ್ದಾರೆ.

ಎಲ್ಲಿಯವರೆಗೆ ಹಮಾಸ್ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ ಅಂದರೆ ಸಣ್ಣ ಮಕ್ಕಳನ್ನು ಅವರ ಪೋಷಕರ ಮುಂದೆ ಕೊಂದದ್ದಾರೆ. ಬಳಿಕ ಪೋಷಕರನ್ನು ಕೊಂದರು. ಬಳಿಕ ಅವರ ತಲೆಗಳನ್ನು ಶಿರಚ್ಚೇದ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದು ನನ್ನ ಜೀವನದಲ್ಲಿ ನಾನು ಎಂದಿಗೂ ನೋಡದ ವಿಷಯ” ಎಂದು ಮಿಲಿಟರಿ ನಾಯಕ ಹೇಳಿದರು.

ಕನಿಷ್ಟ 900 ಇಸ್ರೇಲಿಗಳು ಈ ಸಂಘರ್ಷದಲ್ಲಿ ಮೃತಪಟ್ಟಿದ್ದು, 2,616 ಮಂದಿ ಗಾಯಗೊಂಡಿದ್ದಾರೆ. ಅ.07 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *