DAKSHINA KANNADA
ಮೆಡಿಕಲ್ ಕಾಲೇಜು ಜಾಗದಲ್ಲಿ ಮೀನು ಒಣಗಿಸುವ ಪ್ಯಾಕ್ಟರಿ ಮಾಡಲು ಹೊರಟಿದ್ದರು ಮಾಜಿ ಶಾಸಕರು – ಅಶೋಕ್ ಕುಮಾರ್ ರೈ

ಪುತ್ತೂರು ಮಾರ್ಚ್ 09: ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ವಿಚಾರಕ್ಕೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಗೆ ಶಾಸಕ ಅಶೋಕ್ ಕುಮಾರ್ ರೈ ತಿರುಗೇಟು ನೀಡಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಾಜಿ ಶಾಸಕರು ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಮೀನು ಒಣಗಿಸುವ ಫ್ಯಾಕ್ಟರಿ ಮಾಡಲು ಉದ್ಧೇಶಿಸಿದ್ದರು ಅಂತಹ ಪೆದ್ರು ಅವರಾಗಿದ್ದರು,

ಒಣ ಮೀನಿನ ಫ್ಯಾಕ್ಟರಿ ಆಗುತ್ತಿದ್ದರೆ ಆ ಜಾಗದಲ್ಲಿ ಲಕ್ಷಗಟ್ಟಲೆ ನಾಯಿಗಳು ಬರುತ್ತಿದ್ದವು , ನೊಣಗಳು ಉತ್ಪತ್ತಿಯಾಗುತ್ತಿತ್ತು, ಒಣಗಿದ ಮೀನು ಮಾರಲು ಇವತ್ತಿನವರೆಗೆ ಯಾರೂ ಮನಸ್ಸು ಮಾಡಿಲ್ಲ ಎಂದರು
ಯಾರಿಗೂ ಬೇಡದ ಒಣ ಮೀನಿನ ಘಟಕವನ್ನು ಮಾಜಿ ಶಾಸಕರು ಪುತ್ತೂರಿಗೆ ತರಲು ಉದ್ಧೇಶಿಸಿದ್ದರುಸ ಒಣಗಿದ ಮೀನು ಘಟಕಕ್ಕೆ ಯಾರೂ ಜಾಗ ಕೊಡುವುದಿಲ್ಲ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.