DAKSHINA KANNADA
ಜಿಲ್ಲೆಯಿಂದ ಟ್ರಾನ್ ಫರ್ ಆಗಿ ಹೋಗುವ ಸರಕಾರಿ ಸಿಬ್ಬಂದಿಗಳ ಸಮಸ್ಯೆ ಸರಿಮಾಡಲು ಶಾಸಕ ಅಶೋಕ್ ರೈ ವಿಭಿನ್ನ ಪ್ರಯತ್ನ
ಪುತ್ತೂರು ನವೆಂಬರ್ 06: ಎಲ್ಲರಿಗೂ ಸರಕಾರಿ ಉದ್ಯೋಗಕ್ಕೆ ಸೇರಿ ಸುಂದರ ಬದುಕನ್ನು ಕಟ್ಟಬೇಕೆನ್ನು ಇಚ್ಛೆ ಇರೋದು ಸಾಮಾನ್ಯ. ಆದರೆ ಈ ಇಚ್ಛೆಗೆ ಹಲವಾರು ವಿಘ್ನಗಳು ಎದುರಾಗುವ ಕಾರಣಕ್ಕೆ ಅರ್ಧದಲ್ಲಿ ತಮ್ಮ ಇಚ್ಛೆಗಳನ್ನು ಬಿಡಬೇಕಾದ ಪರಿಸ್ಥಿತಿಯೂ ಇದೆ. ಸರಕಾರಿ ಉದ್ಯೋಗವೆಂದರೆ ಅದಕ್ಕೆ ಬೇಕಾದ ಕೆಲವೊಂದು ತಯಾರಿಗಳನ್ನು ಮಾಡಬೇಕಾಗುವುದು ಅನಿವಾರ್ಯ.ಈ ರೀತಿಯ ತಯಾರಿಗೆ ವೇದಿಕೆಯೊಂದನ್ನು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಮಾಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಯುವಕರು ಸರಕಾರಿ ಉದ್ಯೋಗಕ್ಕೆ ಹೆಚ್ಚು ಹೆಚ್ಚು ಸೇರಿಕೊಳ್ಳಬೇಕು ಎನ್ಜುವ ನಿಟ್ಟಿನಲ್ಲಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಕಾಲ್ ಫಾರ್ ಮಾಡುತ್ತಾರೋ, ಆಯಾ ಇಲಾಖೆಗೆ ಸಂಬಂದಪಟ್ಟ ತರಭೇರಿಗಳನ್ನು ನೀಡುವುದೇ ಈ ಯೋಜನೆಯ ಉದ್ಧೇಶ. ಈ ಪ್ರಯೋಗದ ಮೊದಲ ಭಾಗವಾಗಿ ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿರುವುದು ಗಮನಕ್ಕೆ ಬಂದ ತಕ್ಷಣವೇ ಶಾಸಕರು ಮೆಸ್ಕಾಂ ಉದ್ಯೋಗಕ್ಕೆ ಬೇಕಾದ ತರಭೇತಿಗಳನ್ನು ನೀಡಲು ತಮ್ಮ ಟ್ರಸ್ಟ್ ಮೂಲಕ ಮುಂದಾಗಿದ್ದಾರೆ. ವಿದ್ಯುತ್ ಕಂಬಗಳನ್ನು ಏರುವ ತರಭೇತಿ, 800 ಮೀಟರ್ ಓಟ, ಗುಂಡೆಸೆತ ಹೀಗೆ ಎಲ್ಲಾ ರೀತಿಯ ತರಭೇತಿಯನ್ನು ಆರಂಭಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಮೆಸ್ಕಾಂ ನಲ್ಲಿ ಒಟ್ಟು 2500 ಫೋರ್ ಮೆನ್ ಹುದ್ದೆ ಖಾಲಿ ಇದ್ದು, ಇದರಲ್ಲಿ ಸುಮಾರು 450 ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಸೂಚನೆ ನೀಡಿದೆ. ಈ ಕುರಿತು ಮುಂಬರುವ ಜನವರಿ ತಿಂಗಳಿನಲ್ಲಿ ಭರ್ತಿಯ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಈ ಹಿಂದೆ ಕೆ.ಎಸ್.ಆರ್.ಟಿ.ಸಿ ಯಿಂದಲೂ ಕಂಡಕ್ಟರ್ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿತ್ತು. ಆದರೆ ದಕ್ಷಿಣಕನ್ನಡ ಜಿಲ್ಲೆಯಿಂದ ಕೇವಲ ಒಬ್ಬ ಮಾತ್ರ ಅರ್ಜಿ ಸಲ್ಲಿಸಿದ್ದರು. ಇದೇ ವ್ಯವಸ್ಥೆ ಎಲ್ಲಾ ಇಲಾಖೆಗಳಲ್ಲಿದ್ದು, ಬೇರೆ ಜಿಲ್ಲೆಗಳಿಂದ ಯುವಕರು ಇಲ್ಲಿ ಬಂದು ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ. ಉದ್ಯೋಗ ದೊರೆತ ಕೆಲವೇ ತಿಂಗಳಿನಲ್ಲಿ ತಮ್ಮ ಊರಿಗೆ ವರ್ಗಾವಣೆ ಪಡೆದು ತೆರಳುತ್ತಾರೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದ್ದು, ಇದಕ್ಕಾಗಿ ಜಿಲ್ಲೆಯ ಯುವಕರನ್ನೇ ಸರಕಾರಿ ಹುದ್ದೆಗೆ ಸೇರಿಸಿಕೊಳ್ಳಬೇಕು ಎನ್ನುವ ಶಾಸಕರ ಪ್ರಯತ್ನಕ್ಕೆ ಯುವಕರೂ ಸಾಥ್ ಕೊಟ್ಟಿದ್ದಾರೆ.
ಯುವಕರಿಗೆ ತರಭೇರಿಗೆ ಬೇಕಾದ ಎಲ್ಲಾ ಪರಿಕರಗಳು, ತರಭೇತುದಾರರನ್ನೂ ಶಾಸಕರೇ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದು, ಈ ಪ್ರಯತ್ನ ಯಾವ ಫಲ ನೀಡುತ್ತದೆ ಅನ್ನೋದನ್ನ ಕಾದು ನೋಡೇಕಿದೆ.