Connect with us

DAKSHINA KANNADA

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾನೂನು‌‌ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲ – ಕಾಂಗ್ರೇಸ್ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು ಜನವರಿ 18: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಾನೂನು‌‌ ಸುವ್ಯವಸ್ಥೆ ವಿಫಲ ಎಂಬ ಆರೋಪವನ್ನು ಒಪ್ಪಿಕೊಂಡಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ, ಹಾಡುಹಗಲೇ ದುಡ್ಡು ದೋಚಿಕೊಂಡು ಹೋಗುತ್ತಾರೆಂದರೆ ಪೋಲೀಸ್ ವ್ಯವಸ್ಥೆ ಇಲ್ಲವೇ ಎನ್ನುವ ಸಂಶಯ ಮೂಡುತ್ತದೆ, ಪೋಲೀಸರು ಕೆಲಸ ಮಾಡುತ್ತಿದ್ದಾರಾ, ಪೋಲೀಸರ ಹೆದರಿಕೆ ಅಪರಾಧಿಗಳಿಗೆ ಇಲ್ಲವೇ ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದರು.


ನನ್ನ ಪ್ರಕಾರ ಪೋಲೀಸರ ಹೆದರಿಕೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಇಲ್ಲ, ಈಗ ಬ್ಯಾಂಕ್ ದೋಚುತ್ತಾರೆ, ಇನ್ನು ಮನೆಗೆ ನುಗ್ಗಿ ದೋಚುವ ಸ್ಥಿತಿ ಬರಬಹುದು, ಕಳ್ಳರಿಗೆ ದರೋಡೆಕೋರರಿಗೆ ಶಿಕ್ಷೆಯ ಭಯವಿಲ್ಲ, ಪೋಲಿಸರು ಹೊಡೆದರೆ,ಶೂಟೌಟ್ ಮಾಡಿದರೆ ಮಾನವ ಹಕ್ಕು ಆಯೋಗ ಬರುತ್ತದೆ. ಇದಕ್ಕಾಗಿಯೇ ಯಾವ ಪೋಲೀಸರೂ ಅಪರಾಧಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿಲ್ಲ, ಅಪರಾಧ ಕೃತ್ಯಗಳಲ್ಲಿ ತೊಡಗುವವರನ್ನು ಕಾನೂನು ಮೀರಿ ಕ್ರಮ ಕೈಗೊಳ್ಳಬೇಕು , ಅತ್ಯಾಚಾರ,ಕಳ್ಳತನ ಮಾಡುವವರನ್ನು ಬಿಡಲೇ ಬಾರದು, ಕಾನೂನಿನ ಹಂತವನ್ನು ಮೀರಿ ಪೋಲೀಸರು ಕ್ರಮಕ್ಕೆ ಮುಂದಾಗಬೇಕು ಎಂದರು.
ಅಪರಾಧಿಗಳಿಗೆ ಕಾನೂನಿನಲ್ಲಿ ಯಾವುದೇ ಶಿಕ್ಷೆ ಆಗುವುದು ಕಾಣುತ್ತಿಲ್ಲ

ಇದು ನಮ್ಮ ದುರಾದೃಷ್ಟ, ಈ ವಿಚಾರವನ್ನು ಜಿಲ್ಲೆಯ ಪೋಲೀಸ್ ಅಧಿಕಾರಿಗಳ ಜೊತೆಯೂ ಹೇಳಿದ್ದೇನೆ. ನಿನ್ನೆ ಮಂಗಳೂರು, ನಾಳೆ ಇನ್ನೊಂದು ಕಡೆಯೂ ಆಗಬಹುದು. ನಾವು ಕೇರಳದ ಬದಿಯಲ್ಲೇ ಇರುವವರು, ಎಲ್ಲಾ ಗಡಿಗಳನ್ನು ಸರಿಯಾಗಿ ನೋಡಬೇಕು,ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಕೆಲವು ಗಡಿಭಾಗದಲ್ಲಿ ಸಿಸಿ ಕ್ಯಾಮಾರಾಗಳಿದ್ದರೂ ಅವುಗಳು ಕೆಲಸ ಮಾಡುತ್ತಿಲ್ಲ ಎಂದರು

ಮಂಗಳೂರನಲ್ಲಿ ದರೋಡೆ ನಡೆದ ಬ್ಯಾಂಕಿನಲ್ಲಿ ಸಿಸಿ ಕ್ಯಾಮಾರಾ ವರ್ಕ್ ಆಗಿಲ್ಲ, ಕಳ್ಳರು ಬ್ಯಾಂಕಿನ ಒಳಗೇ ಇರುವವರಾ ಎನ್ನುವ ಸಂಶಯವೂ ಮೂಡುತ್ತಿದೆ, ಬ್ಯಾಂಕಿಗೆ ಸೆಕ್ಯೂರಿಟಿ ಕೂಡ ಇರಲಿಲ್ಲ. ಪೋಲೀಸ್ ಇಲಾಖೆ ಈಗಾಗಲೇ ದರೋಡೆ ಬಗ್ಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ಎರಡು ದಿನಗಳೊಳಗೆ ಪೋಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *