LATEST NEWS
ಬಿಎಸ್ಸಿ ವಿಧ್ಯಾರ್ಥಿನಿ ಈಗ ತಿರುವನಂತಪುರಂ ನ ಮೇಯರ್

ತಿರುವನಂತಪುರಂ: ಎಲ್ ಡಿಎಫ್ ನ ಮುದವನ್ಮುಗಲ್ ವಾರ್ಡ್ ನಿಂದ ಗೆದ್ದು ಕಾರ್ಪೋರೇಟರ್ ಆಗಿ ಆಯ್ಕೆಯಾಗಿರುವ 21 ವರ್ಷದ ಬಿಎಸ್ಸಿ ವಿಧ್ಯಾರ್ಥಿನಿ ಆರ್ಯ ರಾಜೇಂದ್ರನ್ ದೇಶದ ಅತಿ ಕಿರಿಯ ವಯಸ್ಸಿನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ತಿರುವನಂತಪುರಂ ಕಾರ್ಪೋರೇಶನ್ ಮೇಯರ್ ಆಗಿ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ. ಇವರು ಮುದವನ್ಮುಗಲ್ ವಾರ್ಡ್‌ನಿಂದ ಗೆದಿದ್ದರು. ಅವರಿಗೆ 21 ವರ್ಷ ವಯಸ್ಸಾಗಿದ್ದು, ಆರ್ಯ ಅವರು ಅಧಿಕಾರ ವಹಿಸಿಕೊಂಡಾಗ ರಾಜ್ಯದ ಅತ್ಯಂತ ಕಿರಿಯ ಮೇಯರ್ ಆಗಲಿದ್ದಾರೆ.

ಇಂದು ನಡೆದ ಸಿಪಿಎಂ ಜಿಲ್ಲಾ ಸಭೆಯಿಂದ ಆರ್ಯ ರಾಜೇಂದ್ರನ್ ಅವರನ್ನು ಮೇಯರ್ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ. ಆರ್ಯ ಅವರು ಆಲ್ ಸೇಂಟ್ಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ಗಣಿತ ವಿದ್ಯಾರ್ಥಿನಿ.
ಮೇಯರ್ ಹುದ್ದೆಗೆ ಪೆರೂರ್ಕಾಡಾ ವಾರ್ಡ್‌ನಿಂದ ಗೆದ್ದ ಜಮೀಲಾ ಶ್ರೀಧರನ್ ಅವರ ಹೆಸರು ಮೊದಲು ಕೇಳಿಬಂತು. ಅಲ್ಲದೆ ವಂಚಿಯೂರ್‌ನ ಗಾಯತ್ರಿ ಬಾಬು ಅವರ ಹೆಸರೂ ಕೇಳಿಬಂತು. ಸಿಪಿಎಂ ಜಿಲ್ಲಾ ಸಮಿತಿ ಈ ಬಾರಿ ಯುವ ಪ್ರತಿನಿಧಿಗೆ ಅವಕಾಶ ನೀಡಿದೆ.