Connect with us

LATEST NEWS

ಅರುಣ್ ಉಳ್ಳಾಲ್ ಮೇಲೆ ಎಫ್ಐಆರ್ – ವಿಶ್ವ ಹಿಂದೂ ಪರಿಷತ್ ಖಂಡನೆ

ಮಂಗಳೂರು ಅಕ್ಟೋಬರ್ 06: ಖಾಸಗಿ ಕಾರ್ಯಕ್ರಮವೊಂದರಲ್ಲಿ ತಮ್ಮ ಅನಿಸಿಕೆ ಹೇಳಿದ್ದಕ್ಕೆ ಇದೀಗ ಉಪನ್ಯಾಸಕ ಅರುಣ್ ಉಳ್ಳಾಲ್ ಮೇಲೆ ಎಫ್ಐಆರ್ ದಾಖಲಾಗಿದೆ. ಧರ್ಮಗಳ ನಡುವೆ ದ್ವೇಷ ಹಬ್ಬಿಸುವ ಮಾತುಗಳನ್ನು ಆಡಿದ ಆರೋಪದ ಮೇಲೆ ತೊಕ್ಕೊಟ್ಟು ಭಟ್ನಗರದ ನಿವಾಸಿಯಾಗಿರುವ ಖಾಸಗಿ ಕಾಲೇಜಿನ ಉಪನ್ಯಾಸಕ ಅರುಣ್‌ ಉಳ್ಳಾಲ್‌ ಎಂಬುವರ ವಿರುದ್ಧ ಇಲ್ಲಿನ ಸೆನ್‌ ಅಪರಾಧ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


ಅರುಣ್ ಉಳ್ಳಾಲ್ ಅವರ ಮೇಲೆ ಎಫ್ಐಆರ್ ದಾಖಲಾಗಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ಖಂಡನೆ ವ್ಯಕ್ತಪಡಿಸಿದ್ದು, ಅರುಣ್ ಉಳ್ಳಾಲ್ ಅವರ ಜೊತೆಗೆ ನಾವೀದ್ದೇವೆ ಎಂದಿದೆ. ಈ ಕುರಿತಂತೆ ಪೋಸ್ಟ್ ಮಾಡಿರುವ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಡಾ ಅರುಣ್ ಉಳ್ಳಾಲ ಅವರೇ ನಿಮ್ಮ ಜೊತೆ ನಾವು ಇದ್ದವೆ. ನೂರಾರು ಧರ್ಮ ಶಿಕ್ಷಣ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಜಾಗೃತಿಮೂಡಿಸಿ ಹಿಂದೂ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ನಿಮ್ಮ ಕಾರ್ಯವನ್ನು ಮುಂದುವರಿಸಿ.  ಹಿಂದುಗಳನ್ನು ಗುರಿಯಾಗಿಸಿಕೊಂಡು ನಿರಂತರ ಕೇಸು ದಾಖಲಿಸುತ್ತಿರುವ ಹಿಂದೂ ವಿರೋಧಿ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಡಾ ಅರುಣ್ ಉಳ್ಳಾಲ ಅವರ ಮೇಲೆ ಕೇಸು ದಾಖಲಿಸಿದನ್ನು ವಿಶ್ವ ಹಿಂದು ಪರಿಷದ್ ಬಲವಾಗಿ ಖಂಡಿಸುತದೆ ಎಂದಿದ್ದಾರೆ.

ಉಳ್ಳಾಲ ತಾಲ್ಲೂಕಿನ ಕಿನ್ಯ ಬೆಳರಿಂಗೆಯ ಕೇಶವ ಶಿಶುಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ನವದಂಪತಿ ಸಮಾವೇಶದಲ್ಲಿ ಭಾಗವಹಿಸಿದ್ದ ಅರುಣ್‌ ಉಳ್ಳಾಲ್‌ ನವವಿವಾಹಿತರಾಗಿ ಅನಿಸಿಕೆ ವ್ಯಕ್ತಪಡಿಸಿದ್ದರು. ಇದರ ವಿಡಿಯೊ ತುಣು‌ಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ‘ಅರುಣ್ ಉಳ್ಳಾಲ್‌ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 196 (ಧರ್ಮಗಳ ನಡುವೆ ದ್ವೇಷ ಹರಡುವುದು) ಮತ್ತು ಸೆಕ್ಷನ್‌ 351ರ ಅಡಿ (ಆತಂಕ ಸೃಷ್ಟಿಸುವುದು) ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ನಗರ ಪೊಲಿಸ್ ಕಮಿಷನರ್‌ ಅನುಪಮ್ ಅಗರ್ವಾಲ್‌ ತಿಳಿಸಿದ್ದಾರೆ.

‘ನಾವು ಒಂದು ಬದ್ಧತೆ ಇಟ್ಟುಕೊಳ್ಳಬೇಕು. ನಾವು ಅಥವಾ ನಮ್ಮ ಮನೆಯವರ ಮದುವೆ ಸಮಾರಂಭವನ್ನು ಹಿಂದೂ ಸಮುದಾಯದವರ ಸಭಾಂಗಣದಲ್ಲೇ ಏರ್ಪಡಿಸಬೇಕು. ಅನ್ಯ ಸಮುದಾಯದವರು ಕಟ್ಟಿದ ಸಭಾಂಗಣದಲ್ಲಿ ಅವರ ಸಮುದಾಯದವರು ಮದುವೆಯ ಆಗುವುದೇ ಕಡಿಮೆ. ನಮ್ಮದೇ ಆದಾಯ ಅವರಿಗೆ. ನಾವು ಖರೀದಿಸುವ ವಸ್ತುಗಳ ಒಂದಷ್ಟು ಮೊತ್ತ ವಿದೇಶಕ್ಕೆ ಹೋಗುತ್ತದೆ. ಆದು ಯಾರಿಗೋ ಸಲ್ಲುತ್ತದೆ’ ಎಂದು ಅರುಣ್‌ ಉಳ್ಳಾಲ್‌ ಹೇಳಿರುವುದು ಆ ವಿಡಿಯೊ ತುಣುಕಿನಲ್ಲಿದೆ.

‘ಒಂದು ಅಂಶ ಗಮನಿಸಿ; ನಗರದಲ್ಲಿರುವ ಹಿಂದೂಗಳ ಕಾಲೇಜುಗಳಲ್ಲಿ ವರ್ಷ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಗರದಲ್ಲಿ ಅನ್ಯ ಮತೀಯರು ನಡೆಸುತ್ತಿರುವ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದಲ್ಲಿ 11 ಬ್ಯಾಚ್‌ಗಳಿವೆ. ನಮ್ಮವರ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಒಂದು ತರಗತಿಗೂ ವಿದ್ಯಾರ್ಥಿಗಳ ಕೊರತೆ ಇದೆ. ಮಕ್ಕಳನ್ನು ಹಿಂದೂ ಶಾಲೆಗೇ ಸೇರಿಸಬೇಕು. ಇಂತಹ ಆಲೋಚನೆ ಬೆಳೆಸಿಕೊಳ್ಳಬೇಕು’ ಎಂಬ ಮಾತುಗಳೂ ವಿಡಿಯೊದಲ್ಲಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *