DAKSHINA KANNADA
ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ಕರೆ ಮಾಡಿದ್ದಾರೆ…. ಸ್ಪರ್ಧೆಯಿಂದ ಹಿಂದೆ ಸರಿಯಲ್ಲ…. ಅರುಣ್ ಕುಮಾರ್ ಪುತ್ತಿಲ

ಪುತ್ತೂರು ಎಪ್ರಿಲ್ 23: ಇಡೀ ರಾಜ್ಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಹೈವೋಲ್ಟೆಜ್ ಕ್ಷೇತ್ರ ಪುತ್ತೂರಿನಲ್ಲಿ ಮೂವರು ಘಟಾನುಘಟಿಗಳು ಕಣಕ್ಕಿಳಿದಿದ್ದಾರೆ. ಕುತೂಹಲ ಸಂಗತಿ ಅಂದರೆ ಮೂವರು ಹಿಂದೂ ಸಂಘಟನೆಗಳ ಬೆಂಬಲ ಇರುವವರಾಗಿದ್ದಾರೆ. ಅದರಲ್ಲಿ ಬಿಜೆಪಿಯಿಂದ ಬಂಡಾಯ ಎದ್ದು ಪಕ್ಷೇತರ ರಾಗಿ ನಿಂತಿರುವ ಅರುಣ್ ಕುಮಾರ್ ಪುತ್ತಿಲ ಅವರು ಸದ್ಯ ಪುತ್ತೂರಿನಲ್ಲಿ ಟ್ರೆಂಡಿಂಗ್ ನಲ್ಲಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾರರ ಹಾಟ್ ಟಾಫಿಕ್ ಆಗಿದೆ.
ಬಿಜೆಪಿ ವಿರುದ್ದ ಪಕ್ಷೇತರರಾಗಿ ಪುತ್ತೂರು ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅರುಣ್ ಕುಮಾರ್ ಪುತ್ತಿಲ ಅವರು ಮಂಗಳೂರು ಮಿರರ್ ನೊಂದಿಗೆ ನೀಡಿರುವ ಎಕ್ಸಕ್ಲೂಸಿವ್ ಸಂದರ್ಶನದ ವಿವರ

1. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದಿರಾ..?
ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿಲ್ಲ, ಒಂದು ಸ್ವಾಭಿಮಾನದ ಪ್ರಶ್ನೆಯಾಗಿ ಕಾರ್ಯಯಕರ್ತರ ಧ್ವನಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸಬೇಕು, ಸಾಮಾನ್ಯ ಕಾರ್ಯಕರ್ತನಿಗೂ ಬೆಲೆ ಸಿಗಬೇಕೆಂದು ಕಾರ್ಯಕರ್ತರ ಅಭಿಲಾಷೆಯಂತೆ ಚುನಾವಣೆಗೆ ನಿಂತಿದ್ದೇನೆ.
2. ನಿಮ್ಮ ಮತದಾರರು ಯಾರು…?
ನಾವು ನೇರ ಹಿಂದುತ್ವದ ದೃಷ್ಠಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಪುತ್ತೂರಿನಲ್ಲಿ ಎಲ್ಲಾ ಚುನಾವಣೆ ಗೆದ್ದಿದ್ದು, ಹಿಂದುತ್ವದ ಆದಾರದ ಮೇಲೆ, ಆದರೆ ಈ ಬಾರಿ ಕಾರ್ಯಕರ್ತನಿಗೆ ಭಾವನೆಗೆ ಬೆಲೆ ಇಲ್ಲದ ಸನ್ನಿವೇಶ, ಕೊನೆಯ ಕ್ಷಣದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲಗಳಿಂದಾಗಿ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ.ಹಿಂದುತ್ವ ಆಧಾರದಲ್ಲಿ ಈ ಬಾರಿ ನಾನು ಗೆಲುವನ್ನು ಸಾಧಿಸುತ್ತೆನೆ. ಸಿದ್ದಾಂತ ಮತ್ತು ತತ್ವ ಕಾರ್ಯಕರ್ತರಿಗೆ ಬೆಲೆ ಕೊಡದ ಯಾವುದೇ ನಾಯಕನಿದ್ದರೂ ಕೂಡ ಈ ಬಾರಿ ಚುನಾವಣೆಲ್ಲಿ ಉತ್ತರ ಕೊಡುವಂತಹ ಕೆಲಸ ಆಗುತ್ತದೆ.
3. ನಿಮ್ಮ ಸ್ಪರ್ಧೆ ಕಾಂಗ್ರೇಸ್ ವಿರುದ್ದನಾ ಅಥವಾ ಬಿಜೆಪಿ ವಿರುದ್ದನಾ….?
ಹಿಂದುತ್ವಕ್ಕೆ ವಿರುದ್ದವಾಗಿರುವ ಯಾರು ಅಂತ ಗೊತ್ತಿದೆ… ಹಿಂದುತ್ವದ ವಿರೋಧಿಗಳು ಯಾರಿದ್ದಾರೆ. ತತ್ವ ಸಿದ್ದಾಂತ ಬಿಟ್ಟು ಕಾರ್ಯಕರ್ತರನ್ನು ತುಳಿಯುವಂತ ಕಾರ್ಯ ಮಾಡುತ್ತಾರೋ ಅವರ ವಿರುದ್ದ ನಮ್ಮ ಸ್ಪರ್ಧೆ.
4. ಚುನಾವಣೆಯಲ್ಲಿ ಗೆದ್ದರೆ ಬಿಜೆಪಿಗೆ ಸಪೋರ್ಟ್ ಅಂತಿದ್ದಿರಾ..ಇದು ಮತದಾರರಲ್ಲಿ ಗೊಂದಲ ಮಾಡುವುದಿಲ್ಲವಾ…?
ಪ್ರಧಾನಿ ನರೇಂದ್ರ ಮೋದಿಯವರ ಆದರ್ಶವೇ ನಮಗೆ ಪ್ರೇರಣೆ… ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಹಿಂದುತ್ವದ ಆಧಾರದಲ್ಲೇ ಚುನಾವಣೆಗೆ ಸ್ಪರ್ಧೆ
5. ನಿಮಗೆ ಸಂಘ ಪರಿವಾರದ ಸಪೋರ್ಟ್ ಇದೆಯಾ ಅಥವಾ ಕೆಲವು ಹಿಂದೂ ಸಂಘಟನೆಗಳ ಬೆಂಬಲ ಮಾತ್ರನಾ….?
ಮಠಾಧಿಪತಿಗಳು, ಆರ್ ಎಸ್ಎಸ್ ನ ಹಿರಿಯ ಮುಖಂಡರು, ಬಿಜೆಪಿಯ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇನೆ.. ಅವರೆಲ್ಲಾ ಆಶೀರ್ವಾದದಿಂದಲೇ ಚುನಾವಣೆಗೆ ನಿಂತಿದ್ದು, ಈ ಬಾರಿಯ ಗೆಲುವು ಕಾರ್ಯಕರ್ತರ ಗೆಲವು ಆಗಬೇಕು ಅಂತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು…
ಸಂಪೂರ್ಣ ಸಂದರ್ಶನದ ವಿಡಿಯೋ