Connect with us

DAKSHINA KANNADA

ಬ್ರಾಹ್ಮಣರು ಮತ್ತೆ ಪರಶುರಾಮನಂತೆ ಕೊಡಲಿ ಕೈಗೆತ್ತಿಕೊಳ್ಳಬೇಕಾದೀತು – ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ

ಪುತ್ತೂರು ಎಪ್ರಿಲ್ 21: ಸಿಇಟಿ ಪರೀಕ್ಷೆ ವೇಳೆ ವಿಧ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಜೋರಾಗಿದೆ. ಈ ಪ್ರಕರಣ ಖಂಡಿಸಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದೆ.


ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಬ್ರಾಹ್ಮಣ ಸಭಾದ ಮುಖಂಡ ಮಹೇಶ್ ಕಜೆ ಈ ಪ್ರಕರಣ ಮುಗಿದು ಹೋಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಇದು ಬ್ರಾಹ್ಮಣರ ಮೇಲಿನ ದೌರ್ಜನ್ಯದ ಆರಂಭ,ಎಲ್ಲೆಲ್ಲಿ ಬ್ರಾಹ್ಮಣ, ಗೋವುಗಳ ಮೇಲೆ ದೌರ್ಜನ್ಯ ನಡೆಯುತ್ತೋ ಅಲ್ಲಿ ಸರ್ವನಾಶ ಆಗಲಿದೆ ಎಂದರು.


ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲಸ ಈ ಕೃತ್ಯದ ಹಿಂದೆ ಸರಕಾರದ ಕುಮ್ಮಕ್ಕಿದೆ, ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಹೆಚ್ಚಾಗುವ ಸಾಧ್ಯತೆಯಿದೆ, ಇದರಿಂದಾಗಿ ಬ್ರಾಹ್ಮಣರು ಮತ್ತೆ ಪರಶುರಾಮನಂತೆ ಕೊಡಲಿ ಕೈಗೆತ್ತಿಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡದರು.

ರಾಜ್ಯದ ಗೃಹಸಚಿವ ಘಟನೆ ಬಗ್ಗೆ ತಾತ್ಸಾರದ ಹೇಳಿಕೆ ನೀಡುತ್ತಿದ್ದಾರೆ, ಬ್ರಾಹ್ಮಣ ಸಮುದಾಯದ ಮೇಲಿನ ಈ ದೌರ್ಜನ್ಯ ಸಹಿಸಲು ಅಸಾಧ್ಯ ಎಂದು ಅರುಣ್ ಕುಮಾರ್ ಪುತ್ತಿಲ ಆಕ್ರೋಶ ವ್ಯಕ್ತಪಡಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *