DAKSHINA KANNADA
ನೋವು ಆಗಿರುವುದು ಸಹಜ….ಆದರೆ ಆ ನೋವುಗಳನ್ನು ನಾವೆಲ್ಲ ಇವತ್ತು ಮರೆತಿದ್ದೇವೆ – ಅರುಣ್ ಕುಮಾರ್ ಪುತ್ತಿಲ
ಪುತ್ತೂರು ಮಾರ್ಚ್ 17 : ಪುತ್ತೂರಿನಲ್ಲಿ ಬಿಜೆಪಿ ಯಾವತ್ತೂ ಸೋಲೊದಿಲ್ಲ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಲಿ ಎಂದು ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ. ಬಿಜೆಪಿ ಜೊತೆ ಪುತ್ತಿಲ ಪರಿವಾರ ವಿಲೀನಗೊಂಡ ಬಳಿಕ ಮೊದಲ ಬಾರಿಗೆ ಪುತ್ತೂರು ಬಿಜೆಪಿ ಕಚೇರಿಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು ಈ ಹಿಂದೆ ಒಂದಷ್ಟು ಗೊಂದಲ ಆಗಿರುವುದು ಸಹಜ. ನಾನಿದನ್ನು ಒಪ್ಪಿಕೊಳ್ಳುತ್ತೇನೆ. ಎರಡು ಭಾಗಗಳಿಂದಲೂ ನೋವು ಆಗಿರುವುದು ಸಹಜ. ಆದರೆ ಆ ನೋವುಗಳನ್ನು ನಾವೆಲ್ಲ ಇವತ್ತು ಮರೆತಿದ್ದೇವೆ. ನಾವೆಲ್ಲ ಅಣ್ಣ ತಮ್ಮಂದಿರ ಮತ್ತು ಅಕ್ಕ ತಂಗಿಯರ ರೀತಿಯಲ್ಲಿ ಮುಂದಿನ ದಿನ ಪಕ್ಷಕ್ಕಾಗಿ ಕೆಲಸ ಮಾಡಲು ಬದ್ದರಿದ್ದೇವೆ. ಪಕ್ಷ ಕೊಟ್ಟಿರುವ ಸೂಚನೆಯನ್ನು ಶಿರಸ ಪಾಲಿಸಿ, ಪಕ್ಷಕ್ಕೆ ನ್ಯಾಯ ಕೊಡುವ ಮತ್ತು ನರೇಂದ್ರ ಮೋದಿಯವರನ್ನು ಗೆಲ್ಲಿಸುವ ಜವಾಬ್ದಾರಿ ನಾವು ಮಾಡಲಿದ್ದೇವೆ ಎಂದ ಅವರು ಇವತ್ತು ನಾವೆಲ್ಲ ಕಾರ್ಯಾಲಯದಲ್ಲಿ ಭಾಗಿಯಾಗಿ ಮುಕ್ತ ಮನಸ್ಸಿನಿಂದ ಜೊತೆಯಾಗಿದ್ದೇವೆ. ಈ ರೀತಿಯ ವಾತಾವರಣ ಮುಂದಿನ ನೂರಾರು ವರ್ಷಗಳ ಕಾಲ ಇರಲಿ. ಪುತ್ತೂರಿನಲ್ಲಿ ಬಿಜೆಪಿ ಯಾವತ್ತು ಸೋಲೊದಿಲ್ಲ ಎಂಬ ಸಂದೇಶ ಸಮಾಜಕ್ಕೆ ಆಗಲಿ.
ಈ ಕ್ಷಣದಿಂದಲೇ ನಾವೆಲ್ಲ ಪಕ್ಷ ಕೊಟ್ಟಿರುವ ಕೆಲಸವನ್ನು ನಿರ್ವಹಿಸಿಕೊಂಡು ನಾಳಿನ ದಿನ ಚುನಾವಣೆಯಲ್ಲಿ ಬ್ರಿಜೇಶ್ ಚೌಟ ಅವರನ್ನು ನಾಲ್ಕು ಲಕ್ಷ ಅಧಿಕ ಮತಗಳಿಂದ ಗೆಲ್ಲಿಸುವ ಯೋಚನೆ ಕಾರ್ಯಕರ್ತರು ಮಾಡಿದರೆ ಯಾವುದೇ ಕಾರ್ಯ ಕಷ್ಟವಾಗುವುದಿಲ್ಲ ಎಂದರು.
ಇವತ್ತು ಸಾಮಾಜಿಕ ಜಾಲತಾಣ ಬಹಳ ಪ್ರಬಲವಾಗಿದೆ. ಹಾಗಾಗಿ ಪಕ್ಷದ ವಿಚಾರದಲ್ಲಿ ನಮ್ಮ ಸಂಘ, ನಾಯಕರ ವಿರುದ್ಧ ಯಾರು ಕೂಡಾ ವೈಯುಕ್ತಿಕ ವಿಚಾರ ಮುಂದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸಂದೇಶ ರವಾನಿಸಬಾರದು. ಸಾಮಾಜಿಕ ಜಾಲತಾಣದ ವಿಷಯ ಬಿಟ್ಟು ನಾವೆಲ್ಲ ನಮ್ಮ ಬೂತ್ ನಲ್ಲಿ ಕಾರ್ಯ ಮಾಡಬೇಕು ಎಂದರು.