LATEST NEWS
ಕುಸಿದು ಬಿದ್ದು ಮೃತಪಟ್ಟ ರಂಗಭೂಮಿ ಕಲಾವಿದ ಕಾರ್ತಿಕ್ ಕುಮಾರ್

ಬ್ರಹ್ಮಾವರ ಜನವರಿ 23: ರಂಗಭೂಮಿ ಕಲಾವಿದ ಕುಸಿದು ಬಿದ್ದು ಮೃತಪಟ್ಟ ಘಟನೆ ಕುಮ್ರಗೋಡು ಗ್ರಾಮದ ಜಂಬಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಬ್ರಹ್ಮಾವರದ ಕಾರ್ತಿಕ್ ಕುಮಾರ್(31) ಎಂದು ಗುರುತಿಸಲಾಗಿದೆ.
ಇವರು ಸುಮಾರು 1 ತಿಂಗಳಿನಿಂದ ವಿಪರೀತ ಕೆಮ್ಮು ಕಾಯಿಲೆಯಿಂದ ಬಳಲುತ್ತಿದ್ದು, ಅಕ್ಕನ ಮನೆಯ ದೈವದ ಮನೆಯಲ್ಲಿ ದರ್ಶನ ಆಗುತ್ತಿರುವಾಗ ಕುರ್ಚಿಯಲ್ಲಿ ಕುಳಿತಿದ್ದ ಕಾರ್ತಿಕ್ ಕುಸಿದು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಸಂಜೆ ವೇಳೆ ಮೃತಪಟ್ಟರು. ರಂಗಭೂಮಿ ಕಲಾವಿದರಾಗಿದ್ದ ಇವರು, ಮಂದಾರ ಬೈಕಾಡಿ, ಭೂಮಿಕಾ ರಂಗ ತಂಡ ಹಾರಾಡಿ, ದುರ್ಗಾ ಕಲಾ ತಂಡ ಸೇರಿದಂತೆ ವಿವಿಧ ತಂಡಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಹಾಸ್ಯ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರು. ಮೃತರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.