Connect with us

    DAKSHINA KANNADA

    ಸಮಾವೇಶಕ್ಕೆ ಆಗಮಿಸಿದ ಡಾ. ಬಿ.ಆರ್‌.ಶೆಟ್ಟಿಯನ್ನು ತಡೆದ ಪೊಲೀಸರು..!

    ಮಂಗಳೂರು, ಸೆಪ್ಟೆಂಬರ್ 02: ಮಂಗಳೂರು ಪ್ರಧಾನಿ ಭೇಟಿ ವೇಳೆ ಸಮಾವೇಶದ ಸ್ಥಳಕ್ಕೆ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್‌.ಶೆಟ್ಟಿಯನ್ನು ಪೊಲೀಸರು ತಡೆದ ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ.

    ಇಂದು ಮಧ್ಯಾಹ್ನ 12.30ರ ವೇಳೆಗೆ ಸಮಾವೇಶಕ್ಕೆ ಬರಲೆಂದು ಗೋಲ್ಡ್‌ ಫಿಂಚ್‌ ಸಿಟಿ ದ್ವಾರದ ಬಳಿ ಬಿ.ಆರ್‌. ಶೆಟ್ಟಿ ಬರುತ್ತಿದ್ದಂತೆ ಅವರ ಪರಿಚಯ ತಿಳಿಯದ ಪೊಲೀಸರು ಅವರನ್ನು ದ್ವಾರದ ಬಳಿ ತಡೆದು ಹಿಂದಕ್ಕೆ ಕಳುಹಿಸಿದರು. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಬಿ.ಆರ್‌ ಶೆಟ್ಟಿಯನ್ನು ಗಮನಿಸಿ ಸಮಾವೇಶದ ಸ್ಥಳಕ್ಕೆ ಬಿಡಲು ಪೊಲೀಸರನ್ನು ಕೇಳಿಕೊಂಡರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಕಾರ್ಯಕರ್ತರು ‘ಪ್ರಧಾನಿ ಮೋದಿಯನ್ನು ದುಬಾಯಿಗೆ ಕರೆಸಿಕೊಂಡಿದ್ದು ಇವರೇ, ಅವರನ್ನು ಒಳಗೆ ಬಿಡಿ ಎಂದು ವಿನಂತಿಸಿಕೊಂಡರು.

    ಆದರೂ ಪ್ರವೇಶ ನೀಡಿಲು ಪೊಲೀಸರು ನಿರಾಕರಿಸಿದರು. ಇದನ್ನು ಗಮನಿಸಿದ ಬಿಜೆಪಿ ನಾಯಕನೋರ್ವರು ಹಿರಿಯ ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ತಂದು ಗಣ್ಯರ ಗ್ಯಾಲರಿಗೆ ತೆರಳಲು ಅನುವು ಮಾಡಿಕೊಟ್ಟರು. ನಂತರ ಪ್ರೇಕ್ಷಕರ ವಿವಿಐಪಿ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply